ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್‌ಇ) 2021-2022ನೇ ಸಾಲಿನ 10 ಮತ್ತು 12ನೇ ತರಗತಿಗಳಿಗೆ ವಿಶೇಷ ಮೌಲ್ಯಮಾಪನ ವ್ಯವಸ್ಥೆಯನ್ನು ಪ್ರಕಟಿಸಿದೆ. ಎರಡೂ ತರಗತಿಗಳನ್ನು ವರ್ಷಕ್ಕೆ ಎರಡು ಅವಧಿಯಂತೆ ವಿಭಾಗಿಸಲಾಗಿದೆ. ಒಂದೇ ತರಗತಿಗೆ ಎರಡು ಅವಧಿಯಲ್ಲಿ ಮೌಲ್ಯಮಾಪನ ನಡೆಯಲಿದೆ. ಕೋವಿಡ್ ಸಾಂಕ್ರಾಮಿಕದ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಿಬಿಎಸ್‌ಇ ಹೇಳಿದೆ.

ಓದಿ:‘ಸಿದ್ಧತೆ ಇಲ್ಲದೆ ಫಲಿತಾಂಶ ನಿರ್ಣಯಿಸಿದ ಸಿಬಿಎಸ್‌ಇ’

2021-22ನೇ ಸಾಲಿನ ಪಠ್ಯಕ್ರಮದಲ್ಲೂ ಬದಲಾವಣೆ ಮಾಡಲಾಗುತ್ತದೆ. ಆಂತರಿಕ ಮೌಲ್ಯಮಾಪನಕ್ಕೆ ಹೆಚ್ಚು ಒತ್ತು ಮತ್ತು ಆದ್ಯತೆ ನೀಡಲಾಗುತ್ತದೆ ಎಂದು ಸಿಬಿಎಸ್‌ಇ ಹೇಳಿದೆ. ಕೋವಿಡ್ ಎರಡನೇ ಅಲೆಯ ಕಾರಣ 2020-21ನೇ ಸಾಲಿನ ಪರೀಕ್ಷೆಗಳನ್ನು ಸಿಬಿಎಸ್‌ಇ ರದ್ದುಪಡಿಸಿತ್ತು. ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶವನ್ನು ಜುಲೈ 31ರ ಒಳಗೆ ಪ್ರಕಟಿಸಲಿದೆ. ಇದರ ಮಧ್ಯೆಯೇ ಮುಂದಿನ ಶೈಕ್ಷಣಿಕ ವರ್ಷದ ರೂಪುರೇಷೆಯನ್ನು ಸಿಬಿಎಸ್‌ಇ ಅಂತಿಮಗೊಳಿಸಿದೆ.

10 ಮತ್ತು 12ನೇ ತರಗತಿಯ ಪಠ್ಯಕ್ರಮಗಳನ್ನು ವರ್ಷಕ್ಕೆ ಎರಡು ಅವಧಿಯಂತೆ ವಿಭಾಗಿಸಲಾಗಿದೆ. ಇಡೀ ವರ್ಷದ ಪಠ್ಯಕ್ರಮವನ್ನು ಒಂದು ಅವಧಿಗೆ ಶೇ 50ರಂತೆ ವಿಭಾಗಿಸಲಾಗಿದೆ. ಪ್ರತಿ ಅವಧಿಯ ಅಂತ್ಯದಲ್ಲಿ ಮೌಲ್ಯಮಾಪನ ನಡೆಯಲಿದೆ. ಆಂತರಿಕ ಮೌಲ್ಯಮಾಪನ, ಪ್ರಾಯೋಗಿಕ ಪರೀಕ್ಷೆ, ಪ್ರಾಯೋಗಿಕ ಯೋಜನೆಗಳಿಗೆ ಆದ್ಯತೆ ನೀಡಲಾಗುತ್ತದೆ. ಜಾರಿಯಲ್ಲಿರುವ ಮಾರ್ಗಸೂಚಿ ಅನ್ವಯ ಅಂಕಗಳನ್ನು ನೀಡಲಾಗುತ್ತದೆ ಎಂದು ಸಿಬಿಎಸ್‌ಇ ಮಾಹಿತಿ ನೀಡಿದೆ.

ಓದಿ:ಸಿಬಿಎಸ್‌ಇ ಫಲಿತಾಂಶ: ಎನ್ಜಿಒಗೆ ದೆಹಲಿ ಹೈಕೋರ್ಟ್ ತರಾಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.