ನವದೆಹಲಿ: ಚುನಾವಣಾ ಪ್ರಚಾರಕ್ಕೆ ರಾಜಕೀಯ ಪಕ್ಷಗಳು ವಿನಿಯೋಗಿಸುವ ಹಣಕ್ಕೆ ಮಿತಿ ಹೇರುವ ಕಾನೂನು ಮುಂದಿನ ದಿನಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಹೇಳಿದ್ದಾರೆ.

ಚುನಾವಣಾ ಆಯುಕ್ತರಾಗಿ ಶನಿವಾರ ರಾವತ್ ಅವರ ಕರ್ತವ್ಯದಕೊನೆಯ ದಿನ. ಈ ಸಲುವಾಗಿ ಪಿಟಿಐ ನಡೆಸಿದ ಸಂದರ್ಶನದಲ್ಲಿ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ.

‘ಈ ವಿಚಾರವಾಗಿ ಚರ್ಚಿಸಲೆಂದೇ ಆಗಸ್ಟ್ನಲ್ಲಿ ಸರ್ವ ಪಕ್ಷಗಳ ಸಭೆ ಕರೆಯಲಾಗಿತ್ತು. ಚುನಾವಣಾ ಪ್ರಚಾರ ಕಾರ್ಯಗಳಿಗೆ ಪಕ್ಷಗಳು ಮಾಡುವ ವೆಚ್ಚಕ್ಕೆ ಗರಿಷ್ಠ ಮಿತಿ ಇರಬೇಕು ಎಂಬುದಕ್ಕೆ ಸಭೆಯಲ್ಲಿ ಒಮ್ಮತ ವ್ಯಕ್ತವಾಗಿತ್ತು. ಈ ಸಂಬಂಧ ಸಮಿತಿಯೊಂದನ್ನು ರಚಿಸಲಾಗಿತ್ತು. ಅದು ಈಗಾಗಲೇ ಶಿಫಾರಸುಗಳನ್ನು ನೀಡಿದೆ. ಆದರೆ ಅವನ್ನು ಪರಿಶೀಲಿಸಿ, ಕಾನೂನು ಸಚಿವಾಲಯಕ್ಕೆ ತಲುಪಿಸಲು ಆಯೋಗಕ್ಕೆ ಸಾಧ್ಯವಾಗಿಲ್ಲ. ಆದರೆ ಶೀಘ್ರವೇ ಆ ಕೆಲಸ ಆಗಲಿದೆ’ ಎಂದು ರಾವತ್ ಹೇಳಿದ್ದಾರೆ.

ಈ ಕಾನೂನು ಜಾರಿಯಾಗಬೇಕು ಎಂದು ಬಹಳ ವರ್ಷಗಳಿಂದ ಬೇಡಿಕೆಯಿದೆ. ನನ್ನ ಅವಧಿಯಲ್ಲಿ ಜಾರಿಗೆ ತರಲು ಸಾಧ್ಯವಾಗಲಿಲ್ಲವಲ್ಲಾ ಎಂಬ ಬೇಸರ ಕಾಡುತ್ತಿದೆ.

-ಒ.ಪಿ.ರಾವತ್, ನಿರ್ಗಮಿತ ಮುಖ್ಯ ಚುನಾವಣಾ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.