ಆರೋಗ್ಯ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶಕ (ಡಿಜಿಎಚ್ಎಸ್) ಡಾ.ರಾಜೀವ್ ಗರ್ಗ್ ಈ ಕುರಿತು ರಾಜ್ಯಗಳ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.ಸ್ಮಾರ್ಟ್ಫೋನ್ ನೆರವಿನಿಂದತಮ್ಮ ಕುಟುಂಬದವರು, ಸ್ನೇಹಿತರ ಜೊತೆಗೆ ವಿಡಿಯೊ ಕಾನ್ಫರೆನ್ಸ್ ಮುಖಾಂತರ ರೋಗಿಗಳು ಮಾತನಾಡುತ್ತಿದ್ದರೆ, ಅವರಿಗೆ ನೈತಿಕ ಸ್ಥೈರ್ಯ, ಮಾನಸಿಕ ನೆಮ್ಮದಿ, ಬೆಂಬಲ ಸಿಗಲಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಹಲವು ಆಸ್ಪತ್ರೆಗಳಲ್ಲಿ ಮೊಬೈಲ್ ಫೋನ್ಗಳ ಬಳಕೆಗೆ ಅವಕಾಶ ನೀಡಲಾಗುತ್ತಿದೆಯಾದರೂ, ಕೆಲವೆಡೆ ನಿರ್ಬಂಧ ಹೇರಿರುವ ಕಾರಣ ಕೇಂದ್ರ ಈ ಸೂಚನೆ ನೀಡಲಾಗಿದೆ.