ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ಸಾರ್ವಜನಿಕ ಸ್ಥಳ: ಕೇಂದ್ರ ಸರ್ಕಾರದಿಂದ ನಗರಗಳಿಗೆ ಸ್ಪರ್ಧೆ

Published 27 ಏಪ್ರಿಲ್ 2023, 13:35 IST
Last Updated 27 ಏಪ್ರಿಲ್ 2023, 13:35 IST
ಅಕ್ಷರ ಗಾತ್ರ

ನವದೆಹಲಿ: ದೇಶದ ನಗರ ಪಾಲಿಕೆಗಳ ವಾರ್ಡ್‌ಗಳನ್ನು ಆಕರ್ಷಣೀಯವಾಗಿ ರೂಪಿಸಲು ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯವು ಸುಂದರ ನಗರದ ಸ್ಪರ್ಧೆಯನ್ನು ಆರಂಭಿಸಿದೆ.

ಗುರುವಾರ ಈ ಬಗ್ಗೆ ಪ್ರಕಟಣೆ ಹೊರಡಿಸಿದ ಸಚಿವಾಲಯ, ‘ಸಾರ್ವಜನಿಕ ಸ್ಥಳಗಳಲ್ಲಿನ ಸಂಪರ್ಕ, ಸವಲತ್ತು, ಚಟುವಟಿಕೆ, ಪರಿಸರ ಹಾಗೂ ಸೌಂದರ್ಯದ ಆಧಾರದಲ್ಲಿ ನಗರಗಳಿಗೆ ಅಂಕ ನೀಡಲಾಗುತ್ತದೆ‘ ಎಂದಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸುವ ದೇಶದ ನಗರಗಳು ಹೆಸರು ನೊಂದಾಯಿಸಲು ಜುಲೈ 15 ಅಂತಿಮ ದಿನವಾಗಿರುತ್ತದೆ.

‘ಸ್ಪರ್ಧೆಯು ವಾರ್ಡ್‌ ಮತ್ತು ನಗರಗಳಲ್ಲಿರುವ ಸುಂದರವಾದ ಸಾರ್ವಜನಿಕ ಸ್ಥಳ ಪ್ರದರ್ಶಿಸಲು ವೇದಿಕೆಯಾಗಿದೆ. ಇದರಿಂದ ಪರಂಪರೆ, ಸಂಸ್ಕೃತಿಗೆ ಉತ್ತೇಜನ ದೊರಕುತ್ತದೆ. ಜೊತೆಗೆ, ಸಮುದಾಯದ ಸುಸ್ಥಿರತೆ ಮತ್ತು ಪರಿಸರ ಕಾಳಜಿ ಉತ್ತೇಜನಗೊಳ್ಳುತ್ತದೆ. ಆದ್ದರಿಂದ, ರಾಜ್ಯ ಮತ್ತು ನಗರಗಳ ನಡುವೆ ಅಧ್ಯಯನಶೀಲತೆ ಹೆಚ್ಚುತ್ತದೆ‘ ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT