ಅಮರಾವತಿ: ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ₹4,200 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ಮಾಹಿತಿ ನೀಡಿದ್ದಾರೆ.

₹15000 ಕೋಟಿ ವೆಚ್ಚದ ಈ ಯೋಜನೆಗೆ ವಿಶ್ವಬ್ಯಾಂಕ್ ಹಾಗೂ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ತಲಾ ₹6,868 ಕೋಟಿ ನೀಡಲು ಒಪ್ಪಿಕೊಂಡಿವೆ. ಉಳಿದ ₹1400 ಕೋಟಿಯನ್ನು ಕೇಂದ್ರ ಸರ್ಕಾರ ನೀಡಲಿದೆ.

‘ವಿಶ್ವ ಬ್ಯಾಂಕ್ ತಾನು ನೀಡಬೇಕಿರುವ ಹಣದ ಮೊದಲ ಕಂತಿನ ಭಾಗವಾಗಿ ₹1760 ಕೋಟಿಯನ್ನು ಕಳೆದ ತಿಂಗಳು ಕೇಂದ್ರ ಸರ್ಕಾರಕ್ಕೆ ತಲುಪಿಸಿದೆ. ಎಡಿಬಿ ಕೂಡ ಅಷ್ಟೇ ಮೊತ್ತದ (₹1760 ಕೋಟಿ) ಹಣ ನೀಡಿರಬಹುದು, ಎಬಿಡಿ ನೀಡಿರುವ ಹಣದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ಮೊತ್ತದ ಜತೆಗೆ ಕೇಂದ್ರವೂ ತನ್ನ ಪಾಲಿನ ₹800 ಕೋಟಿ ಸೇರಿಸಿ ಒಟ್ಟು ₹4,200 ಕೋಟಿ ಬಿಡುಗಡೆ ಮಾಡಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಲ್ಲದೇ, ಯೋಜನೆಯ ಒಟ್ಟು ವೆಚ್ಚದ ಶೇ 25ರಷ್ಟು ಮೊತ್ತವನ್ನು ಮೊಬಿಲೈಸೇಷನ್ ಅಡ್ವಾನ್ಸ್ ಎಂದು ನೀಡಲು ಕೇಂದ್ರ ಒಪ್ಪಿಕೊಂಡಿತ್ತು. ಅದರಂತೆ ₹4200 ಕೋಟಿ ನೀಡಿದೆ. ರಾಜ್ಯ ಸರ್ಕಾರವು ಯೋಜನೆಯ ಪ್ರಗತಿಯನ್ನು ತೋರಿಸಿ, ಬಿಲ್ಗಳನ್ನು ಸಲ್ಲಿಕೆ ಮಾಡಿದ ಬಳಿಕ ಉಳಿದ ಮೊತ್ತವನ್ನು ಕಂತುಗಳಲ್ಲಿ ಬಿಡುಗಡೆಗೊಳಿಸಲಿದೆ. ಜ.22ರಂದು ಯೋಜನೆಯ ಕಾರ್ಯಾರಂಭವಾಗಿದ್ದು ಇನ್ನು 2–3 ತಿಂಗಳಲ್ಲಿ ಅವುಗಳ ಪ್ರಗತಿ ಸಾಧ್ಯವಾಗಲಿದೆ. ಹೀಗಾಗಿ ಮುಂದಿನ ಕಂತಿನ ಬಿಡುಗಡೆಗೆ ಇನ್ನೂ 6 ತಿಂಗಳ ಸಮಯ ಬೇಕಾಗಬಹುದು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.