ಉತ್ತರಕಾಶಿ: ಹಿಮಾಲಯ ಶ್ರೇಣಿಯಲ್ಲಿನ ಪ್ರಮುಖ ದೇವಾಲಯಗಳ ‘ಚಾರ್ ಧಾಮ್’ ಯಾತ್ರೆ ಮಂಗಳವಾರದಿಂದ ಆರಂಭವಾಗಿದೆ. ಅಕ್ಷಯ ತೃತೀಯದಂದು ಉತ್ತರಕಾಶಿ ಜಿಲ್ಲೆಯಲ್ಲಿನ ಗಂಗೋತ್ರಿ ಮತ್ತು ಯಮನೋತ್ರಿ ದೇವಾಲಯಗಳ ಬಾಗಿಲು ತೆರೆಯಲಾಗಿದೆ.

ವೇದ ಮಂತ್ರಗಳ ಉದ್ಘೋಷದೊಂದಿಗೆ ಗಂಗೋತ್ರಿ ದೇವಾಲಯದ ಬಾಗಿಲನ್ನು ಬೆಳಿಗ್ಗೆ 11.30ಕ್ಕೆ ಹಾಗೂ ಯಮನೋತ್ರಿ ದೇಗುಲದ ಬಾಗಿಲನ್ನು ಮಧ್ಯಾಹ್ನ 1.15ಕ್ಕೆ ತೆರೆಯಲಾಯಿತು. ದೇವಾಲಯದ ಆಡಳಿತ ಮಂಡಳಿ ಸದಸ್ಯರೊಂದಿಗೆ ಸಾವಿರಾರು ಭಕ್ತರು ಈ ಕ್ಷಣಕ್ಕೆ ಸಾಕ್ಷಿಯಾದರು.

ಇದು ಪ್ರತಿವರ್ಷ ದೇಶ, ವಿದೇಶಗಳ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ.

ಚಾರ್ ಧಾಮ್ ಯಾತ್ರೆ ಅಥವಾ ನಾಲ್ಕು ಪವಿತ್ರ ಸ್ಥಳಗಳ ಯಾತ್ರೆಯು ಯಮನೋತ್ರಿಯಿಂದ ಆರಂಭವಾಗುತ್ತದೆ. ನಂತರ ಗಂಗೋತ್ರಿ, ಕೇದಾರನಾಥದ ಭೇಟಿ ಕೊನೆಗೆ ಬದರಿನಾಥ ದರ್ಶನನೊಂದಿಗೆ ಕೊನೆಗೊಳ್ಳುತ್ತದೆ. ಕೇದಾರನಾಥ ಗುಡಿ ಬಾಗಿಲು ಮೇ 9 ಹಾಗೂ ಬದರಿನಾಥ ದೇವಾಲಯದ ಬಾಗಿಲನ್ನು ಮೇ 10ರಂದು ತೆರೆಯಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.