ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಅವರ ಪತಿ ರಾಜ್ ಕುಂದ್ರಾ ಮೇಲೆ ವಂಚನೆ ಆರೋಪದಡಿ ದೂರು ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಪೊಲೀಸರನ್ನು ಸಂಪರ್ಕಿಸಿರುವ ಸಚಿನ್ ಜೋಶಿ ಎಂಬ ಅನಿವಾಸಿ ಭಾರತೀಯರೊಬ್ಬರು ಈ ಹಿಂದೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ನೇತೃತ್ವದ ಚಿನ್ನದ ವ್ಯಾಪಾರ ಕಂಪನಿ ಸತ್ಯುಗ್ ಗೋಲ್ಡ್ ಪ್ರೈವೇಟ್ ಲಿಮಿಟೆಡ್ನಿಂದ ತಾವು ಮೋಸ ಹೋಗಿದ್ದಾಗಿ ಪ್ರಕರಣ ದಾಖಲಿಸಿದ್ದಾರೆ.

ದೂರುದಾರರ ಪ್ರಕಾರ, ಮಾರ್ಚ್ 2014ರಲ್ಲಿ ಗೋಲ್ಡ್ ಸ್ಕೀಮ್ನಲ್ಲಿ ಕಂಪನಿಯಿಂದ ₹18.58 ಲಕ್ಷಕ್ಕೆ ಸುಮಾರು ಒಂದು ಕೆಜಿ ಚಿನ್ನವನ್ನು ಖರೀದಿಸಿದ್ದಾರೆ. ಪಂಚವಾರ್ಷಿಕ ಯೋಜನೆಯಡಿ, ಖರೀದಿದಾರರಿಗೆ ರಿಯಾಯಿತಿ ದರದಲ್ಲಿ ಚಿನ್ನದ ಕಾರ್ಡ್ ನೀಡಲಾಗುತ್ತಿತ್ತು. ಅವಧಿ ಕೊನೆಯಲ್ಲಿ ನಿರ್ದಿಷ್ಟ ಪ್ರಮಾಣದ ಚಿನ್ನ ಪಡೆದುಕೊಳ್ಳಬಹುದೆಂಬ ಭರವಸೆ ನೀಡಲಾಗಿತ್ತು.

ಸಚಿನ್ ಜೋಶಿ ಅವರ ಅವಧಿ ಯೋಜನೆ ಮಾರ್ಚ್ 25, 2019 ರಂದು ಕೊನೆಗೊಂಡಿದೆ. ಸ್ಕೀಮ್ ಪ್ರಕಾರ, ಅವರು ನಿರ್ದಿಷ್ಟ ಪ್ರಮಾಣದ ಚಿನ್ನವನ್ನು ಪಡೆದುಕೊಳ್ಳಲು ಪ್ರಯತ್ನಿಸಿದಾಗ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿದ್ದ ಕಂಪನಿಯ ಕಚೇರಿ ಸ್ಥಗಿತಗೊಂಡಿರುವುದು ದೂರುದಾರರಿಗೆ ತಿಳಿದುಬಂದಿದೆ.

ಈ ಬಗ್ಗೆ ವಿಚಾರಿಸಿದಾಗ ಕಂಪನಿಯ ನಿರ್ದೇಶಕರಾಗಿದ್ದ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾಗಿ ದೂರುದಾರರಿಗೆ ಗೊತ್ತಾಗಿದೆ.

ಈ ಬಗ್ಗೆ ವಂಚನೆಯ ಆರೋಪದಡಿ ಸಚಿನ್ ಜೋಶಿ ದೂರು ದಾಖಲಿಸಿದ್ದಾರೆ.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.