ಇದು ಭಾರತದ ನೆಲದಲ್ಲಿ ಮರಿಗಳಿಗೆ ಜನ್ಮ ನೀಡಿದ ನಾಲ್ಕನೇ ಚೀತಾ ಇದಾಗಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಜ್ವಾಲಾ ಹೆಸರಿನ ಚೀತಾವು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಅವುಗಳ ಪೈಕಿ ಒಂದು ಮರಿ ಮಾತ್ರ ಬದುಕುಳಿಯುವಲ್ಲಿ ಯಶಸ್ವಿಯಾಗಿತ್ತು. ಇದಕ್ಕೂ ಮುನ್ನ ಆಶಾ ಹೆಸರಿನ ಚೀತಾವು ಮೂರು ಮರಿಗಳಿಗೆ ಜನ್ಮ ನೀಡಿತ್ತು.
ಇದರೊಂದಿಗೆ ಕುನೊ ಉದ್ಯಾನವನದಲ್ಲಿ ಮರಿಗಳು ಸೇರಿದಂತೆ ಒಟ್ಟು ಚೀತಾಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಕಳೆದ ವರ್ಷದಿಂದ ಇಲ್ಲಿಯವರೆಗೆ ಕುನೊದಲ್ಲಿ ಒಟ್ಟು 10 ಚೀತಾ ಮೃತಪಟ್ಟಿವೆ. ಅವುಗಳಲ್ಲಿ ಏಳು ವಯಸ್ಕ ಚೀತಾಗಳಾಗಿದ್ದರೆ, ಮೂರು ಮರಿ ಚೀತಾಗಳು. ಈ ವರ್ಷದ ಜನವರಿ 16ರಂದು 10ನೇ ಚೀತಾ ಮೃತಪಟ್ಟಿತ್ತು. ಅದಕ್ಕೆ ಶೌರ್ಯ ಎಂದು ಹೆಸರಿಡಲಾಗಿತ್ತು.