ಬಿಜಾಪುರ/ಸುಕ್ಮಾ(ಛತ್ತೀಸಗಢ): ಛತ್ತೀಸಗಢದ ಬಸ್ತರ್ ವಿಭಾಗದ ಎರಡು ಜಿಲ್ಲೆಗಳಲ್ಲಿ ಶನಿವಾರ 51 ನಕ್ಸಲರು ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶರಣಾದ ನಕ್ಸಲರಿಗೆ ಒಟ್ಟು ₹1.61 ಕೋಟಿ ನೆರವು ನೀಡಲಾಗಿದೆ. ಶರಣಾದವರಲ್ಲಿ 34 ಮಹಿಳೆಯರು ಇದ್ದಾರೆ.

ಬಸ್ತರ್ ಜಿಲ್ಲೆಯ ಕೇಂದ್ರ ಕಚೇರಿಯಿರುವ ಜಗದಲ್ಪುರದಲ್ಲಿ ‘ಬಸ್ತರ್ ಪಾಂಡಮ್ 2026 ಉತ್ಸವ’ ಉದ್ಘಾಟನೆ ಸಂಬಂಧ ರಾಯಪುರಕ್ಕೆ ಮೂರು ದಿನಗಳ ಪ್ರವಾಸಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದು, ಇದೇ ಸಂದರ್ಭದಲ್ಲಿ ಈ ಶರಣಾಗತಿ ನಡೆದಿದೆ.

ಬಸ್ತರ್ ವಲಯದ ಐಜಿಪಿ ಸುಂದರರಾಜ್ ಪಟ್ಟಿಲಿಂಗಂ, ‘ಬಿಜಾಪುರ ಜಿಲ್ಲೆಯಲ್ಲಿ 20 ಮಹಿಳೆಯರು ಸೇರಿದಂತೆ 30 ಕಾರ್ಯಕರ್ತರು ಶರಣಾಗಿದ್ದಾರೆ. ನೆರೆಯ ಸುಕ್ಮಾ ಜಿಲ್ಲೆಯಲ್ಲಿ 14 ಮಹಿಳೆಯರನ್ನು ಒಳಗೊಂಡಂತೆ 21 ಮಂದಿ ಶರಣಾಗಿದ್ದಾರೆ. ‘ಬಸ್ತರ್ ಪೊಲೀಸರ ಪೂನಾ ಮಾರ್ಗೆಮ್ ಪುನರ್ವಸತಿ ಉಪಕ್ರಮ’ದ ಅಡಿಯಲ್ಲಿ ನಕ್ಸಲರು ಮುಖ್ಯವಾಹಿನಿಗೆ ಸೇರಿದರು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.