ಸುಕ್ಮಾ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ, ಏಳು ಮಹಿಳೆಯರೂ ಸೇರಿದಂತೆ ಒಟ್ಟು 26 ನಕ್ಸಲರು ಬುಧವಾರ ಶರಣಾಗಿದ್ದಾರೆ. ಇವರಲ್ಲಿ 13 ಮಂದಿಯ ಕುರಿತು ಸುಳಿವು ನೀಡಿದವರಿಗೆ ಒಟ್ಟಾಗಿ ₹65 ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು.

ಹಿರಿಯ ಪೊಲೀಸರು ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಅಧಿಕಾರಿಗಳ (ಸಿಆರ್ಪಿಎಫ್) ಮುಂದೆ ನಕ್ಸಲರು ಶರಣಾದರು.

ಇವರು, ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ (ಪಿಎಲ್ಜಿಎ) ನಕ್ಸಲ್ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದರು. ದಕ್ಷಿಣ ಬಸ್ತಾರ್ ವಿಭಾಗ, ಮಾಡ್ ವಿಭಾಗ ಹಾಗೂ ಆಂಧ್ರಪ್ರದೇಶ– ಒಡಿಶಾ ಗಡಿಯಲ್ಲಿ ಸಕ್ರಿಯರಾಗಿದ್ದರು ಎಂದು ಪೊಲೀಸರು ತಿಳಿಸಿದರು.

ಶರಣಾದವರಿಗೆ ತಲಾ ₹50,000 ನೆರವು ನೀಡಲಾಗಿದ್ದು, ಪುನರ್ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದರು.