ಭೋಪಾಲ್: ಮೂರೂವರೆ ವರ್ಷದ ಬಾಲಕಿ ಮೇಲೆ ಶಿಕ್ಷಕ ಅತ್ಯಾಚಾರವೆಸಗಿರುವ ಘಟನೆ ಇಲ್ಲಿನ ಖಾಸಗಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ.
ಶಾಲೆಯ ಕಂಪ್ಯೂಟರ್ ಶಿಕ್ಷಕ ಕಾಸಿಮ್ ರೆಹಾನ್ ಎಂಬಾತನೇ ಆರೋಪಿಯಾಗಿದ್ದು, ಆತನನ್ನು ಪೋಕ್ಸೊ ಪ್ರಕರಣದಡಿ ಬುಧವಾರ ಬಂಧಿಸಲಾಗಿದೆ. ಘಟನೆಯ ನಂತರ ಶಾಲೆಗೆ ಬೀಗ ಹಾಕಲಾಗಿದೆ. ಶಾಲೆಯ ಮಾನ್ಯತೆ ರದ್ದುಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಆಕೆಯ ತಾಯಿ ಶಾಲಾ ಆಡಳಿತ ಮಂಡಳಿಗೆ ಸೋಮವಾರ ದೂರು ನೀಡಿದ್ದರಾದರೂ ಅದನ್ನು ನಿರ್ಲಕ್ಷಿಸಲಾಗಿತ್ತು. ಬಳಿಕ ಬಾಲಕಿ ತಾಯಿ ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿಯನ್ನು ಅತ್ಯಾಚಾರಕ್ಕೊಳಗಾದ ಬಾಲಕಿ ‘ಡ್ಯಾಡಿ ಅಂಕಲ್’ ಎಂದು ಕರೆಯುತ್ತಿದ್ದಳು. 28 ವರ್ಷದ ಆರೋಪಿ ಶಿಕ್ಷಕ ನೀಲಿಚಿತ್ರ ವೀಕ್ಷಿಸುವ ವ್ಯಸನ ಅಂಟಿಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ. ಜಾರ್ಖಂಡ್‌ನಲ್ಲಿ ನಡೆದ ಅತ್ಯಾಚಾರ ಖಂಡಿಸಿ ನಡೆದ ಮೆರವಣಿಗೆಯಲ್ಲಿ ಈತ ಭಾಗವಹಿಸಿದ್ದ.