ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಶಾಲಾ ಬಸ್‌ ಪಲ್ಟಿ; ಮಕ್ಕಳು ಸೇರಿ 4 ಸಾವು

Published 2 ಏಪ್ರಿಲ್ 2024, 16:06 IST
Last Updated 2 ಏಪ್ರಿಲ್ 2024, 16:06 IST
ಅಕ್ಷರ ಗಾತ್ರ

ಬಾರಾಬಂಕಿ(ಉತ್ತರ ಪ್ರದೇಶ): ಸಮೀಪದ ಸಲಾರ್‌ಪುರ ಗ್ರಾಮದ ಬಳಿ ಮಂಗಳವಾರ ಶಾಲಾ ಬಸ್‌ ಪಲ್ಟಿಯಾದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟು, ಇತರ 32 ಮಕ್ಕಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೂರತ್‌ಗಂಜ್‌ನ ಹರಕ್ಕ ಸಂಯುಕ್ತ ಶಾಲೆಯ ಬಸ್‌ನಲ್ಲಿ ಮಕ್ಕಳು ಲಖನೌಗೆ ಪಿಕ್‌ನಿಕ್‌ಗೆ ಹೋಗಿದ್ದರು. ಸಂಜೆ ಸೂರತ್‌ಗಂಜ್‌ಗೆ ಮರಳುವಾಗ ಈ ಅಪಘಾತ ಸಂಭವಿಸಿದೆ. ಗಾಯಗೊಂಡಿರುವ ಮಕ್ಕಳನ್ನು ಲಖನೌದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್‌ ಸವಾರನೊಬ್ಬನನ್ನು ರಕ್ಷಿಸಲು ಚಾಲಕ ಪ್ರಯತ್ನಿಸಿದ ವೇಳೆ, ಬಸ್‌ ಪಲ್ಟಿಯಾಗಿದೆ. ಬಸ್‌ ನಿರ್ವಾಹಕ ಹಾಗೂ 12–13 ವರ್ಷ ವಯಸ್ಸಿನ ಮೂವರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಹೆಚ್ಚುವರಿ ಎಸ್ಪಿ ಅಖಿಲೇಶ್‌ ನಾರಾಯಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT