ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶಗಳಿಗೆ ಬೆದರಿಕೆ, ಹಿಮಾಲಯದಲ್ಲಿ ಸಂಘರ್ಷ ಸಲ್ಲದು: ಚೀನಾಗೆ ಅಮೆರಿಕ ಎಚ್ಚರಿಕೆ

Last Updated 22 ಜುಲೈ 2020, 7:39 IST
ಅಕ್ಷರ ಗಾತ್ರ

ವಾಷಿಂಗ್‌ಟನ್: ತನ್ನ ಸುತ್ತಲ ದೇಶಗಳೊಂದಿಗೆ ಕಾಲುಕೆರದು ಜಗಳ ಮಾಡುತ್ತಿರುವ ಚೀನಾ, ಇದೇ ರೀತಿ ದೇಶಗಳನ್ನು ಹೆದರಿಸುವುದು ಮತ್ತು ಹಿಮಾಲಯದಲ್ಲಿ ರಕ್ತಪಾತಕ್ಕೆ ಕಾರಣವಾಗುವುದನ್ನು ಮುಂದುವರಿಸುವುದು ಸರಿಯಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.

ಲಂಡನ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟನ್‌ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರೊಂದಿಗೆ ನಡೆದ ಮಾತುಕತೆಯಲ್ಲಿ ಚೀನಾದ ವಿಚಾರವೂ ಚರ್ಚೆಗೆ ಬಂತು ಎಂದು ಮಾಹಿತಿ ನೀಡಿದರು.

'ಸಮದ್ರದ ಗಡಿಯನ್ನು ನಿಮಗೆ ಬೇಕಾದಂತೆ ವಿಸ್ತರಿಸಲು ಸಾಧ್ಯವಿಲ್ಲ. ಸುತ್ತಮುತ್ತಲ ದೇಶಗಳನ್ನು ಹೆದರಿಸಿ, ಹಿಮಾಲದಯದಲ್ಲಿ ರಕ್ತಪಾತಕ್ಕೆ ಕಾರಣವಾಗುವಂತಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಮನಬಂದಂತೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವಂತಿಲ್ಲ' ಎಂದು ಚೀನಾದ ಬಗ್ಗೆ ಪಾಂಪಿಯೊ ಹೇಳಿದರು.

'ಚೀನಾದ ನಡೆಯನ್ನು ತಡೆಯಲು ಅಮೆರಿಕ ಮಾಡುತ್ತಿರುವ ಪ್ರಯತ್ನಕ್ಕೆ ಬ್ರಿಟನ್‌ನ ಸಹಕಾರವನ್ನೂ ನೀವು ಬಯಸುವಿರಾ' ಎಂಬ ಪ್ರಶ್ನೆಗೆ ಉತ್ತರಿಸಿದ ಮೈಕ್ ಪಾಂಪಿಯೊ, ಹಿಮಾಲಯದಲ್ಲಿ ಬೆದರಿಕೆಯೊಡ್ಡುತ್ತಿರುವ ವಿಚಾರ ಪ್ರಸ್ತಾಪಿಸಿದರು.

'ನಾವು ಈ ವಿಚಾರವನ್ನು ಹಾಗೆ ಯೋಚಿಸುವುದಿಲ್ಲ. ಗಡಿ ವಿಚಾರದಲ್ಲಿ ಚೀನಾ ಸೇರಿದಂತೆ ವಿಶ್ವದ ಎಲ್ಲ ದೇಶಗಳೂ ಒಂದು ವ್ಯವಸ್ಥೆಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಈ ವಿಚಾರದ ಬಗ್ಗೆ ಇಡೀ ಜಗತ್ತು ಗಮನ ಕೊಡಬೇಕು' ಎಂದು ಅವರು ಹೇಳಿದರು.

'ಹಾಂಗ್‌ಕಾಂಗ್‌ ಜನರ ಸ್ವಾತಂತ್ರ್ಯದ ಆಸೆಯನ್ನು ಹೇಗೆ ಹತ್ತಿಕ್ಕಲಾಯಿತು, ಚೀನಾ ಕಮ್ಯುನಿಸ್ಟ್ ಪಕ್ಷವು ತನ್ನ ಸುತ್ತಲಿನ ದೇಶಗಳಲ್ಲಿಹೇಗೆ ಭೀತಿ ಹುಟ್ಟಿಸುತ್ತಿದೆ, ದಕ್ಷಿಣ ಚೀನಾ ಸಮುದ್ರದಲ್ಲಿ ಮಿಲಿಟರಿ ಹಸ್ತಕ್ಷೇಪ ಎಷ್ಟು ಹೆಚ್ಚಾಗಿದೆ ಮತ್ತು ಭಾರತದೊಂದಿಗೆ ನಡೆದ ಹಿಂಸಾತ್ಮಕ ಸಂಘರ್ಷದ ಬಗ್ಗೆ ನಾವು ಮಾತನಾಡಿದೆವು' ಎಂದು ಪಾಂಪಿಯೊ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT