ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಕಾರ್ಯತಂತ್ರದ ಸ್ವಾಯತ್ತತೆ ಪ್ರತಿಪಾದಿಸಬೇಕಿದೆ: ಸಿಡಿಎಸ್‌

Published 5 ಅಕ್ಟೋಬರ್ 2023, 15:45 IST
Last Updated 5 ಅಕ್ಟೋಬರ್ 2023, 15:45 IST
ಅಕ್ಷರ ಗಾತ್ರ

ನವದೆಹಲಿ: ಚೀನಾ ಪ್ರಬಲಗೊಂಡಂತೆ ಅದರ ಆಕ್ರಮಣಶೀಲತೆ ಈಗ ಹೆಚ್ಚು ಸ್ಪಷ್ಟವಾಗುತ್ತಿದೆ. ಭಾರತವು ತನ್ನ ಕಾರ್ಯತಂತ್ರದ ಲೆಕ್ಕಾಚಾರದಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್‌ ಅನಿಲ್‌ ಚೌಹಾಣ್‌ ಗುರುವಾರ ಅಭಿಪ್ರಾಯಪಟ್ಟಿದ್ದಾರೆ. 

ನವದೆಹಲಿಯ ಮಾಣೆಕ್‌ ಶಾ ಕೇಂದ್ರದಲ್ಲಿ ನಡೆದ ಜನರಲ್‌ ಕೆ.ವಿ ಕೃಷ್ಣರಾವ್‌ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಭದ್ರತಾ ಸವಾಲುಗಳು ಮತ್ತು ಭೌಗೋಳಿಕ ರಾಜಕೀಯ ಬದಲಾವಣೆಗಳ ಕುರಿತು ಒಳನೋಟವನ್ನು ಒದಗಿಸಿದರು.  

ಚೀನಾ ನಡುವಿನ ಗಡಿ ವಿವಾದದ ಕುರಿತು ಮಾತನಾಡಿದ ಚೌಹಾಣ್‌, ಭಾರತ ಈಗ ತನ್ನ ಕಾರ್ಯತಂತ್ರ ಸ್ವಾಯತ್ತೆಯನ್ನು ಪ್ರಬಲವಾಗಿ ಪ್ರತಿಪಾದಿಸಬೇಕಿದೆ ಎಂದು ಹೇಳಿದರು. 

‘ಅವಕಾಶಗಳನ್ನು ಬಳಸಿಕೊಳ್ಳುವ ಉದ್ದೇಶದಿಂದ ಕಾರ್ಯತಂತ್ರದ ಸ್ವಾಯತ್ತೆಯು ಹೆಚ್ಚು ಪ್ರಸ್ತುತವೆನಿಸುತ್ತದೆ. ನಮ್ಮ ಭವಿಷ್ಯವೂ ಅವಕಾಶಗಳ ಮೇಲೆಯೇ ನಿರ್ಧಾರವಾಗುತ್ತದೆ. ಹೀಗಾಗಿ ನಾವು ಅವಕಾಶಗಳ ಬಗ್ಗೆ ಹೆಚ್ಚು ಯೋಚಿಸಬೇಕು. ಚೀನಾದ ಕಾರಣಕ್ಕೆ ನಾನು ಈ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದೇನೆ. ಚೀನಾ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿರುವುದನ್ನು ಭಾರತವು ತನ್ನ ಕಾರ್ಯತಂತ್ರದ ಲೆಕ್ಕಾಚಾರದಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಅವರು ವಿವರಿಸಿದರು. 

ಭಾರತ ತನ್ನ ನಡೆಯಲ್ಲಿ ಕಾರ್ಯತಂತ್ರದ ಸ್ವಾಯತ್ತೆಯನ್ನು ಪ್ರದರ್ಶಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದ ಚೌಹಾಣ್‌, ಇದೇ ವೇಳೆ ದೇಶ ತನ್ನ ಅಲಿಪ್ತ ನೀತಿಯಿಂದ ‘ವಿಶ್ವ ಮಿತ್ರ’ ಯುಗಕ್ಕೆ ಹೇಗೆ ದಾಪುಗಾಲು ಹಾಕುತ್ತಿದೆ ಎಂಬುದನ್ನೂ ವಿವರಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT