ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

NDA ಸಭೆಗೂ ಮುನ್ನ ಶಾ ಭೇಟಿ ಮಾಡಿದ ಚಿರಾಗ್; ಸೀಟು ಹೊಂದಾಣಿಕೆಯತ್ತ ಎಲ್‌ಜೆಪಿ ಚಿತ್ತ?

Published 17 ಜುಲೈ 2023, 14:34 IST
Last Updated 17 ಜುಲೈ 2023, 14:34 IST
ಅಕ್ಷರ ಗಾತ್ರ

ನವದೆಹಲಿ: ಆಡಳಿತಾರೂಢ ಎನ್‌ಡಿಎ ಮಂಗಳವಾರ ನಡೆಸಲಿರುವ ಸಭೆಗೆ ಒಂದು ದಿನ ಮುನ್ನವೇ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ– ರಾಮ್ ವಿಲಾಸ್‌) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ದೆಹಲಿಯಲ್ಲಿ ಸೋಮವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.

ಸಭೆಯ ಬಳಿಕ ಎಲ್‌ಜೆಪಿ (ಆರ್‌) ಮೂಲಗಳು ‘ಸಕಾರಾತ್ಮಕ ಫಲಿತಾಂಶ’ದ ಬಗ್ಗೆ  ವಿಶ್ವಾಸ ವ್ಯಕ್ತಪಡಿಸಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಸಭೆಯಲ್ಲಿ ಚಿರಾಗ್ ಪಾಲ್ಗೊಳ್ಳುವುದನ್ನು ಖಚಿತಪಡಿಸಿವೆ.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗೆ ತಮ್ಮ ಪಕ್ಷದ ಸ್ಥಾನ ಹೊಂದಾಣಿಕೆ ಕುರಿತು ಖಚಿತಪಡಿಸಿಕೊಳ್ಳುವುದು ಈ ಭೇಟಿಯ ಹಿಂದಿನ ಉದ್ದೇಶ ಎನ್ನಲಾಗಿದೆ. ಈ ಹಿಂದೆ ಬಿಹಾರ ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ನಿತ್ಯಾನಂದ ರೈ ಅವರು ಎರಡು ಬಾರಿ ಚಿರಾಗ್ ಅವರನ್ನು ಭೇಟಿ ಮಾಡಿದ್ದರು.

ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಅವಿಭಜಿತ ಎಲ್‌ಜೆಪಿಯು 2019ರ ಲೋಕಸಭಾ ಚುನಾವಣೆಯಲ್ಲಿ ಆರು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆಗ ಬಿಜೆಪಿಯೊಂದಿಗೆ ತನ್ನ ಸೀಟು ಹಂಚಿಕೆಯ ಒಪ್ಪಂದದ ಭಾಗವಾಗಿ ರಾಜ್ಯಸಭಾ ಸ್ಥಾನವನ್ನೂ ಪಡೆದಿತ್ತು. ಇದೀಗ ರಾಮ್ ವಿಲಾಸ್ ಬಣದಲ್ಲಿರುವ ಚಿರಾಗ್ ಅವರು ಬಿಜೆಪಿಯು ಈ ಹಿಂದಿನಂತೆಯೇ ತನ್ನ ಸೀಟು ಹಂಚಿಕೆಯ ಒಪ್ಪಂದವನ್ನು ಮುಂದುವರಿಸಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

ಬಿಹಾರದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ತಮ್ಮ ಪಕ್ಷದ ಸೀಟು ಹಂಚಿಕೆಗೂ ಮುನ್ನ ಈ ಕುರಿತು ಬಿಜೆಪಿಯಿಂದ ಸ್ಪಷ್ಟತೆ ಪಡೆಯಲು ಆದ್ಯತೆ ನೀಡಿದ್ದಾರೆ ಎಂದೂ ಎಲ್‌ಜೆಪಿ (ಆರ್‌) ಮೂಲಗಳು ತಿಳಿಸಿವೆ.

ಈ ನಡುವೆ ಸಂಸತ್ತಿನಲ್ಲಿ ಪಾರಸ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಚಿರಾಗ್ ಅವರು ತಮ್ಮ ತಂದೆ ರಾಮ್‌ ವಿಲಾಸ್ ಅವರು ಪ್ರತಿನಿಧಿಸುತ್ತಿದ್ದ ಹಾಜಿಪುರ ಕ್ಷೇತ್ರವನ್ನು ಬಿಜೆಪಿ ತಮಗೆ ಬಿಟ್ಟುಕೊಡಬೇಕೆಂದು ಬಯಸುತ್ತಿದ್ದಾರೆ. ಆದರೆ, ಚಿರಾಗ್‌ನ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್ ಅವರು ಕೂಡಾ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ರಾಮ್ ವಿಲಾಸ್ ಅವರ ರಾಜಕೀಯ ವಾರಸುದಾರ ತಾನು, ಚಿರಾಗ್ ಅಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷರಾಗಿರುವ ಕೇಂದ್ರ ಸಚಿವ ಪಶುಪತಿ ಕುಮಾರ್ ಪಾರಸ್ ಅವರು ಈಗಾಗಲೇ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದಾರೆ.

ಚಿರಾಗ್ ಅವರನ್ನು ಹೊರತುಪಡಿಸಿ ಪಾರಸ್ ಅವರು ತಮ್ಮ ಪಕ್ಷದ ನಾಲ್ವರು ಸಂಸದರ ಬೆಂಬಲ ಹೊಂದಿದ್ದಾರೆ. ಆದರೆ, ಚಿರಾಗ್ ಅವರು ತಮ್ಮ ತಂದೆ ರಾಮ್ ವಿಲಾಸ್ ಅವರ ಮತ ಬ್ಯಾಂಕ್ ಅನ್ನು ಆನುವಂಶಿಕವಾಗಿ ತಮ್ಮತ್ತ ಸೆಳೆಯುವಲ್ಲಿ ಹೆಚ್ಚು ಯಶಸ್ವಿಯಾಗಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ವಿಭಜನೆಯಾದ ಬಳಿಕ ರಾಜ್ಯದಲ್ಲಿ ರಾಜಕೀಯವಾಗಿ ನಿರ್ಣಾಯಕ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಿಜೆಪಿಯು ಚಿರಾಗ್ ಅವರನ್ನು ತನ್ನೆಡೆಗೆ ಸೆಳೆಯಲು ಉತ್ಸುಕವಾಗಿದೆ.

2020ರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಯಿಂದ ದೂರವಾಗಿದ್ದ ರಾಮ್ ವಿಲಾಸ್ ಅವರು, ಆಗ ಬಿಜೆಪಿಯ ಮಿತ್ರಪಕ್ಷದಲ್ಲಿದ್ದ ನಿತೀಶ್ ಕುಮಾರ್ ಅವರನ್ನು ವಿರೋಧಿಸಿದ್ದರು. ಆದರೆ, ಪ್ರಮುಖ ವಿಷಯಗಳ ಸಂದರ್ಭಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT