ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಟೋಬರ್ ಬಳಿಕ ‘ಡ್ರೋನ್’ ಅಧಿಕೃತ ಹಾರಾಟ

Last Updated 18 ಜುಲೈ 2018, 17:26 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಾಗರಿಕ ಉದ್ದೇಶಕ್ಕೆ ಡ್ರೋನ್‌ಗಳ ಬಳಕೆ ಅಕ್ಟೋಬರ್‌ನಿಂದ ಆರಂಭವಾಗುವ ಸಾಧ್ಯತೆಯಿದೆ.ಈ ಸಂಬಂಧ ಮಾರ್ಗಸೂಚಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯವು ಸದ್ಯದಲ್ಲೇ ಪ್ರಕಟಿಸಲಿದೆ. 2017ರ ನವೆಂಬರ್‌ನಲ್ಲಿ ಕರಡು ನಿಯಮಗಳನ್ನು ಪ್ರಕಟಿಸಿತ್ತು.

ನಾಗರಿಕರು ಡ್ರೋನ್ ಬಳಸುವುದರ ಮೇಲೆ ವಿಮಾನಯಾನ ನಿರ್ದೇಶನಾಲಯವು 2014ರಿಂದ ನಿರ್ಬಂಧ ವಿಧಿಸಿದೆ.

ಡ್ರೋನ್‌ಗಳ ನೋಂದಣಿ ಹಾಗೂ ಹಾರಾಟಕ್ಕೆ ಅನುಮತಿ ನೀಡಲು ಆನ್‌ಲೈನ್ ವ್ಯವಸ್ಥೆಯನ್ನು ಸಚಿವಾಲಯ ಜಾರಿಗೊಳಿಸುತ್ತಿದೆ ಎಂದು ಕಾರ್ಯದರ್ಶಿ ಆರ್.ಎನ್. ಚೌಬೆ ತಿಳಿಸಿದ್ದಾರೆ. ಕೇಂದ್ರ ಸಚಿವ ಜಯಂತ್ ಸಿನ್ಹಾ ನೇತೃತ್ವದ 13 ಸದಸ್ಯರ ಕಾರ್ಯಪಡೆಯು ಈ ಪ್ರಕ್ರಿಯೆ ಜಾರಿಯ ಹೊಣೆ ನಿರ್ವಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT