ನವದೆಹಲಿ: ಸುಪ್ರೀಂ ಕೋರ್ಟ್ ಶುಕ್ರವಾರ ವಿಶೇಷ ಸನ್ನಿವೇಶವೊಂದಕ್ಕೆ ಸಾಕ್ಷಿಯಾಯ್ತು. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು ತಮ್ಮ ಸಾಕು ಪುತ್ರಿಯರೊಂದಿಗೆ ನ್ಯಾಯಾಲಯಕ್ಕೆ ಆಗಮಿಸಿದ್ದು, ಅಲ್ಲಿದ್ದ ಹಿರಿಯ ನ್ಯಾಯಮೂರ್ತಿಗಳು ಹಾಗೂ ವಕೀಲರಿಗೆ ಅಚ್ಚರಿ ಉಂಟು ಮಾಡಿತು.

ತಮ್ಮ ಸಾಕು ಮಕ್ಕಳನ್ನು ಕೋರ್ಟ್ನ ಒಳಗೆ ಕರೆದುಕೊಂಡು ಹೋಗಿ, ಪ್ರೇಕ್ಷಕರ ಗ್ಯಾಲರಿಯಿಂದ ನ್ಯಾಯಾಲದ ಕೊಠಡಿಯನ್ನು ತೋರಿಸಿ, ನ್ಯಾಯಾಲಯದ ಕಾರ್ಯನಿರ್ವಹಣೆಯ ಬಗ್ಗೆ ವಿವರಿಸಿದರು.

ಬಳಿಕ ನಂಬರ್ 1 ಕೊಠಡಿಯಲ್ಲಿರುವ ಸಿಜೆಐ ಕಚೇರಿಗೆ ಕರೆದುಕೊಂಡು ಹೋಗಿ ಕೋರ್ಟ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು.

ಬಳಿಕ ತಮ್ಮ ಛೇಂಬರ್ಗೆ ಕರೆದುಕೊಂಡು ಹೋಗಿ ಅಲ್ಲಿದ್ದವರನ್ನು ಪರಿಚಯಿಸಿಕೊಟ್ಟರು.

ಇಬ್ಬರು ಸಾಕು ಮಕ್ಕಳಿಗೆ ಮುಖ್ಯನ್ಯಾಯಮೂರ್ತಿಗಳು ಕೋರ್ಟ್ ಕಾರ್ಯನಿರ್ವಹಣೆಯ ಬಗ್ಗೆ ವಿವರಿಸುತ್ತಾ ಇದ್ದರೆ, ಅಲ್ಲಿದ್ದ ವಕೀಲರ ಕಣ್ಣು ಸಿಜೆಐ ಅವರ ಮೇಲೆ ನೆಟ್ಟಿತ್ತು.

ಡಿ.ವೈ ಚಂದ್ರಚೂಡ್ ಅವರಿಗೆ ಮಹಿ (16) ಹಾಗೂ ಪ್ರಿಯಾಂಕ (20) ಎನ್ನುವ ಇಬ್ಬರು ಸಾಕು ಪುತ್ರಿಯರಿದ್ದು, ಇಬ್ಬರು ಕೂಡ ವಿಕಲಾಂಗರು. ಸುಪ್ರೀಂ ಕೋರ್ಟನ್ನು ಒಮ್ಮೆ ನೋಡಬೇಕು ಎಂದು ಇಬ್ಬರು ಆಸೆ ವ್ಯಕ್ತಪಡಿಸಿದ್ದರಿಂದ ಸಿಜೆಐ ಅವರನ್ನು ಕರೆದುಕೊಂಡು ಬಂದಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.