ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ನರೇಂದ್ರ ಮೋದಿ ನವ ಭಾರತದ ವಾಸ್ತುಶಿಲ್ಪಿ: ಸಿಎಂ ಯೋಗಿ ಆದಿತ್ಯನಾಥ

Published 17 ಡಿಸೆಂಬರ್ 2023, 2:43 IST
Last Updated 17 ಡಿಸೆಂಬರ್ 2023, 2:43 IST
ಅಕ್ಷರ ಗಾತ್ರ

ಲಖನೌ: ವಾರಾಣಸಿಗೆ ಎರಡು ದಿನಗಳ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸ್ವಾಗತಿಸಿದರು.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಆದಿತ್ಯನಾಥ ‘ನವ ಭಾರತದ ವಾಸ್ತುಶಿಲ್ಪಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ 25 ಕೋಟಿ ಜನರಿಂದ ಹೃತ್ಪೂರ್ವಕ ಸ್ವಾಗತ ಎಂದು ತಿಳಿಸಿದರು. ನಗರದಲ್ಲಿ ಎರಡು ದಿನಗಳ ವಾಸ್ತವ್ಯ ಹೂಡಲಿರುವ ಮೋದಿ ಅವರು, ‘ಕಾಶಿ ತಮಿಳು ಸಂಗಮಂ’ ಎರಡನೇ ಆವೃತ್ತಿಯನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ, ‘ಕನ್ಯಾಕುಮಾರಿ–ವಾರಾಣಸಿ ತಮಿಳು ಸಂಗಮ್‌ ರೈಲಿ’ಗೆ ಚಾಲನೆ ನೀಡುವುದರ ಜೊತೆಗೆ ವಾರಾಣಸಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಇಂದು ಹಾಗೂ ನಾಳೆ ಎರಡು ದಿನಗಳ ವಾರಾಣಸಿ ಪ್ರವಾಸವನ್ನು ಕೈಗೊಂಡಿರುವ ಪ್ರಧಾನಿ ಮೋದಿ, ಇಂದು ಮಧ್ಯಾಹ್ನ 3.30ರ ಸುಮಾರಿಗೆ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5.15ರ ವೇಳೆಗೆ ನಮೋ ಘಾಟ್‌ನಲ್ಲಿ ‘ಕಾಶಿ ತಮಿಳು ಸಂಗಮಂ 2023’ ಅನ್ನು ಉದ್ಘಾಟಿಸಲಿದ್ದಾರೆ. ನಾಳೆ (ಸೋಮವಾರ) ಬೆಳಿಗ್ಗೆ ಸ್ವರವೇದ ಮಹಾಮಂದಿರಕ್ಕೆ ಭೇಟಿ ನೀಡಲಿದ್ದು, ಮಧ್ಯಾಹ್ನ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ₹19,150 ಕೋಟಿಗೂ ಹೆಚ್ಚಿನ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT