ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರದಲ್ಲಿ ಕುಸಿದ ತಾಪಮಾನ: ಒಡಿಶಾ, ಪಂಜಾಬ್‌, ಹರಿಯಾಣದಲ್ಲಿ ಚಳಿ ಹೆಚ್ಚಳ

Published 17 ಡಿಸೆಂಬರ್ 2023, 9:36 IST
Last Updated 17 ಡಿಸೆಂಬರ್ 2023, 9:36 IST
ಅಕ್ಷರ ಗಾತ್ರ

ಚಂಡೀಗಢ: ದೇಶದಲ್ಲಿ ದಿನದಿಂದ ದಿನಕ್ಕೆ ಚಳಿ ಏರಿಕೆಯಾಗುತ್ತಿದೆ. ಪಂಜಾಬ್‌, ಹರಿಯಾಣ ಮತ್ತು ಒಡಿಶಾ ರಾಜ್ಯಗಳಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವರದಿ ತಿಳಿಸಿದೆ.

ಪಂಜಾಬ್‌ನ ಅಮೃತಸರದಲ್ಲಿ ಕನಿಷ್ಠ 5.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಫರೀದ್‌ಕೋಟ್ ಮತ್ತು ಬಟಿಂಡಾದಲ್ಲಿ ಕನಿಷ್ಠ ತಾಪಮಾನ 6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಪಾದರಸದ ಮಟ್ಟ ಪಟಿಯಾಲದಲ್ಲಿ 6.7 ಡಿಗ್ರಿ ಸೆಲ್ಸಿಯಸ್ ಮತ್ತು ಲುಧಿಯಾನದಲ್ಲಿ 7.1 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಸಿದೆ.

ಉಭಯ ರಾಜ್ಯಗಳ ರಾಜಧಾನಿಯಾಗಿರುವ ಚಂಡೀಗಢದಲ್ಲಿ ಕನಿಷ್ಠ ತಾಪಮಾನ 6.2 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.

ಒಡಿಶಾದಲ್ಲಿ ತಾಪಮಾನದ ಮಟ್ಟ ಕುಸಿದಿದ್ದು, 11 ಸ್ಥಳಗಳಲ್ಲಿ ಪಾದರಸವು 10 ಡಿಗ್ರಿ ಸೆಲ್ಸಿಯಸ್ ಮಾರ್ಕ್‌ಗಿಂತ ಕೆಳಗೆ ಇಳಿದಿದೆ.

ಕಂಧಮಾಲ್ ಜಿಲ್ಲೆಯ ಫುಲ್ಬಾನಿ ಒಡಿಶಾದ ಅತ್ಯಂತ ತಂಪಾದ ಸ್ಥಳವಾಗಿದ್ದು, ಕನಿಷ್ಠ 8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT