ನವದೆಹಲಿ: ಕೆಲದಿನಗಳ ಹಿಂದಷ್ಟೇ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರುವ ಮಹಿಳಾ ಮೀಸಲಾತಿ ಮಸೂದೆಯ ‘ಅಸಲಿಯತ್ತನ್ನು’ ಇಂದು (ಸೆ. 25) ದೇಶದ 21 ನಗರಗಳಲ್ಲಿ ಪತ್ರಿಕಾಗೋಷ್ಠಿ ಮಾಡುವ ಮೂಲಕ ಪಕ್ಷದ ಮಹಿಳಾ ನಾಯಕರು ತೆರೆದಿಡಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಸಂಸದೆ ರಜನಿ ಪಾಟೀಲ್ ಅವರು ಅಹಮದಾಬಾದ್‌ನಲ್ಲಿ ಹಾಗೂ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ನೆಟ್ಟಾ ಡಿಸೋಜಾ ಅವರು ಹೈದರಾಬಾದ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಅಮೃತ್ ಧವನ್ ಅವರು ಬೆಂಗಳೂರಿನಲ್ಲಿ, ಭವ್ಯಾ ನರಸಿಂಹಮೂರ್ತಿ ಗೋವಾದಲ್ಲಿ, ರಜನೀತ್ ರಂಜನ್ ಭುವನೇಶ್ವರದಲ್ಲಿ, ಅಲ್ಕಾ ಲಂಬಾ ಅವರು ಜೈಪುರದಲ್ಲಿ, ಅಮಿ ಯಾಗ್ನಿಕ್ ಅವರು ಮುಂಬೈನಲ್ಲಿ, ರಾಗಿಣಿ ನಾಯಕ್ ಅವರು ರಾಂಚಿ ಹಾಗೂ ಶಮಾ ಮೊಹಮ್ಮದ್ ಅವರು ಶ್ರೀನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ದೇಶದ 21 ನಗರಗಳಲ್ಲಿ 21 ಮಹಿಳಾ ನಾಯಕರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ತಿಳಿಸಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆ ಹೆಸರಿನಲ್ಲಿ ಮೋದಿ ಸರ್ಕಾರ ಮಾಡಿರುವ ದ್ರೋಹವನ್ನು ಬಯಲಿಗೆಲೆಯಲಾವುದು ಎಂದು ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.