ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಉಳಿಸಬೇಕಾದರೆ ‘ಮದ್ಯ ಕುಡಿಯಿರಿ, ಗುಟ್ಕಾ ತಿನ್ನಿ‘ ಎಂದ ಬಿಜೆಪಿ ಸಂಸದ

Last Updated 8 ನವೆಂಬರ್ 2022, 5:58 IST
ಅಕ್ಷರ ಗಾತ್ರ

ರೆವಾ (ಮಧ್ಯ ಪ್ರದೇಶ): ನೀರಿನ ಸಂರಕ್ಷಣೆಗೆ ‘ಮದ್ಯ ಕುಡಿಯಿರಿ‘, ‘‌ಗುಟ್ಕಾ ತಿನ್ನಿ‘ ಎಂದು ಇಲ್ಲಿನ ಬಿಜೆಪಿ ಸಂಸದ ಜನಾರ್ದನ ಮಿಶ್ರಾ ಜನರಿಗೆ ಸಲಹೆ ನೀಡಿದ್ದಾರೆ.

ರೆವಾದಲ್ಲಿ ನಡೆದ ಜಲ ಸಂರಕ್ಷಣಾ ಕಾರ್ಯಗಾರದಲ್ಲಿ ಅವರು ಈ ರೀತಿಯಾಗಿ ನುಡಿದಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಕೆಲ ದಿನ‌ಗಳ ಹಿಂದಷ್ಟೇ ಬರಿಗೈಯಲ್ಲಿ ಶೌಚಾಲಯ ಶುಚಿಗೊಳಿಸುವ ಮೂಲಕ ಮಿಶ್ರಾ ಸುದ್ದಿಗೆ ಗ್ರಾಸವಾಗಿದ್ದರು.

‘ನೀರು ಸಿಗದೆ ಭೂಮಿ ಬರಡಾಗುತ್ತಿದೆ. ನಾವು ಅದನ್ನು ಉಳಿಸಬೇಕಾಗಿದೆ. ಬೇಕಿದ್ರೆ ಗುಟ್ಕಾ ತಿನ್ನಿ, ಮದ್ಯ ಕುಡಿಯಿರಿ. ಸಲ್ಯೂಷನ್‌ (ಒಂದು ರೀತಿಯ ಅಂಟು) ಅಥವಾ ಅಯೋಡೆಕ್ಸ್‌ ಬೇಕಿದ್ರೆ ತಿನ್ನಿ. ಆದರೆ ನೀರಿನ ಮಹ‌ತ್ವವನ್ನು ಅರಿತುಕೊಳ್ಳಿ‘ ಎಂದು ಮಿಶ್ರಾ ಹೇಳಿದ್ದಾರೆ.

#WATCH | Rewa, Madhya Pradesh: "Lands are running dry of water, it must be saved... Drink alcohol, chew tobacco, smoke weed or smell thinner and solution but understand the importance of water," says BJP MP Janardan Mishra during a water conservation workshop pic.twitter.com/Nk878A9Jgc

‘ಯಾವ ಸರ್ಕಾರವಾದರೂ ನೀರಿನ ಮೇಲಿನ ತೆರಿಗೆ ರದ್ದು ಮಾಡಿದರೆ, ನಮಗೆ ಅದು ಬೇಡ ಎಂದು ಹೇಳಿ. ವಿದ್ಯುತ್‌ ಬಿಲ್‌ ಸಹಿತ ಇನ್ನಿತರ ತೆರಿಗೆಗಳನ್ನು ರದ್ದು ಮಾಡಲು ಅವರಿಗೆ ಹೇಳಿ‘ ಎಂದು ಮಿಶ್ರಾ ಜನರಿಗೆ ಸಲಹೆ ನೀಡಿದ್ದಾರೆ.

ರೆವಾದಲ್ಲಿರುವ ಕೃಷ್ಣರಾಜ್‌ ಕಪೂರ್ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ಜಲ ಸಂರಕ್ಷಣೆ ಕುರಿತಾದ ಕಾರ್ಯಗಾರದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT