ನವದೆಹಲಿ: ರೈಲು ನಿಲ್ದಾಣಗಳ ಕೌಂಟರ್ಗಳಲ್ಲಿ ಖುದ್ದಾಗಿ ಟಿಕೆಟ್ ಖರೀದಿಸುವವರಿಗಿಂತ ಐಆರ್ಸಿಟಿಸಿ ಆ್ಯಪ್ ಮೂಲಕ ಆನ್ಲೈನ್ನಲ್ಲಿ ಟಿಕೆಟ್ ಖರೀದಿಸುವವರು ಹೆಚ್ಚು ಹಣ ಪಾವತಿಸುತ್ತಾರೆ. ಅನುಕೂಲ ಸೇವಾ ಶುಲ್ಕ ಮತ್ತು ವಹಿವಾಟು ಶುಲ್ಕಗಳ ಕಾರಣದಿಂದ ಹೆಚ್ಚು ಹಣ ಪಾವತಿಸುತ್ತಾರೆ ಎಂದು ಸರ್ಕಾರ ತಿಳಿಸಿದೆ.

ರಾಜ್ಯಸಭೆಯಲ್ಲಿ ಶಿವಸೇನೆ ಸಂಸದ ಸಂಜಯ್ ರಾವುತ್ ಅವರು ಶುಕ್ರವಾರ ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ‘ಆನ್ಲೈನ್ ಟಿಕೆಟ್ ಸೇವೆ ಒದಗಿಸಲು ಐಆರ್ಸಿಟಿಸಿಗೆ ಹೆಚ್ಚುವರಿ ವೆಚ್ಚ ತಗುಲುತ್ತದೆ. ಹೀಗಾಗಿ ಅನುಕೂಲ ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ. ಇದರ ಜೊತೆಗೆ ಗ್ರಾಹಕರು ಬ್ಯಾಂಕುಗಳಿಗೆ ವಹಿವಾಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ’ ಎಂದು ತಿಳಿಸಿದರು.

ಭಾರತೀಯ ರೈಲ್ವೆಯ ಗ್ರಾಹಕಸ್ನೇಹಿ ಕ್ರಮಗಳಲ್ಲಿ ಐಆರ್ಸಿಟಿಸಿ ಸಹ ಒಂದು. ಪ್ರಸ್ತುತ ಶೇ 80ರಷ್ಟು ಕಾಯ್ದಿರಿಸುವ ಟಿಕೆಟ್ಗಳನ್ನು ಆನ್ಲೈನ್ ಮೂಲಕ ಬುಕ್ ಮಾಡಲಾಗುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.