ಮುಂಬೈ: ಕೊರೊನಾದ ರೂಪಾಂತರ ತಳಿ ‘ಡೆಲ್ಟಾ ಪ್ಲಸ್’ನಿಂದಾಗಿ ಸಂಭವಿಸಿರುವ ಸಾವಿನ ಸಂಖ್ಯೆ ಮಹಾರಾಷ್ಟ್ರದಲ್ಲಿ ಐದಕ್ಕೆ ಏರಿಕೆಯಾಗಿದೆ.

ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್ ಅನ್ನು ಹಂತಹಂತವಾಗಿ ತೆರವುಗೊಳಿಸುತ್ತಿರುವ ಸಂದರ್ಭದಲ್ಲೇ ‘ಡೆಲ್ಟಾ ಪ್ಲಸ್’ ಪ್ರಸರಣ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಆಗಸ್ಟ್ 15ರಿಂದ ಎರಡು ಡೋಸ್ ಲಸಿಕೆ ಪಡೆದವರಿಗೆ ಮುಂಬೈ ಮೆಟ್ರೊಪಾಲಿಟನ್ ಪ್ರದೇಶದ ಉಪನಗರ ರೈಲುಗಳಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ.

ಈವರೆಗೆ ಮಹಾರಾಷ್ಟ್ರದಲ್ಲಿ 66 ‘ಡೆಲ್ಟಾ ಪ್ಲಸ್’ ಪ್ರಕರಣಗಳು ವರದಿಯಾಗಿವೆ.

ಮಹಾರಾಷ್ಟ್ರದ ರತ್ನಾಗಿರಿಯಲ್ಲಿ 80 ವರ್ಷದ ಮಹಿಳೆಯೊಬ್ಬರು ಜೂನ್‌ನಲ್ಲಿ ಕೋವಿಡ್‌ನಿಂದ ಮೃತಪಟ್ಟಿದ್ದರು. ಅದು, ರಾಜ್ಯದಲ್ಲಿ ಡೆಲ್ಟಾ ಪ್ಲಸ್‌ನ ಮೊದಲ ಪ್ರಕರಣವಾಗಿತ್ತು. ಕಳೆದ ಕೆಲವು ದಿನಗಳಲ್ಲಿ ಮುಂಬೈ ಮತ್ತು ರತ್ನಾಗಿರಿ ಜಿಲ್ಲೆಗಳಲ್ಲಿ ಎರಡು ಮಂದಿ ಮೃತಪಟ್ಟಿದ್ದರು.

ಓದಿ:ಮುಂಬೈಗೆ ‘ಡೆಲ್ಟಾ ಪ್ಲಸ್’ ಸಂಕಟ: ಪ್ರಕರಣಗಳ ಸಂಖ್ಯೆ 65ಕ್ಕೆ ಏರಿಕೆ

ರಾಯಗಡದ ನಾಗೊಠಾಣೆಯಲ್ಲಿ ‘ಡೆಲ್ಟಾ ಪ್ಲಸ್’ ತಗುಲಿದ್ದ 69 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಸಮೀಪದ ಉರಾನ್‌ನಲ್ಲಿ ಮಹಿಳೆಯೊಬ್ಬರೂ ಈ ರೂಪಾಂತರದಿಂದ ಸೋಂಕಿತರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಜುಲೈ 24ರಂದು ಮೃತಪಟ್ಟ ಮಹಿಳೆಯೊಬ್ಬರ ಕೋವಿಡ್ ಪರೀಕ್ಷಾ ವರದಿಯಲ್ಲಿ ‘ಡೆಲ್ಟಾ ಪ್ಲಸ್’ ದೃಢಪಟ್ಟಿತ್ತು ಎಂದು ಮುಂಬೈ ನಗರಾಡಳಿತ ತಿಳಿಸಿದೆ. ಮತ್ತೊಂದು ಸಾವು ರತ್ನಾಗಿರಿಯಲ್ಲಿ ಸಂಭವಿಸಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

‘ಡೆಲ್ಟಾ ಪ್ಲಸ್’ನಿಂದಾಗಿ ಮೃತಪಟ್ಟವರಲ್ಲಿ ಇಬ್ಬರು ಎರಡೂ ಡೋಸ್ ಲಸಿಕೆ ಪಡೆದಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.