ಪಟ್ನಾ(ಬಿಹಾರ): ಕಪ್‌ಲಿಂಗ್(ಎರಡು ಬೋಗಿಗಳನ್ನು ಜೋಡಿಸುವ ಕೊಂಡಿ) ತುಂಡಾಗಿ ದೆಹಲಿ–ಇಸ್ಲಾಂಪುರ ಮಗಧ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ಪತ್ಯೇಕಗೊಂಡ ಘಟನೆ ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ಇಂದು ನಡೆದಿದೆ.
‘ಜಿಲ್ಲೆಯ ಟ್ವಿನಿಗಂಜ್ ಮತ್ತು ರಘುನಾಥಪುರ ರೈಲು ನಿಲ್ದಾಣಗಳ ನಡುವೆ ಬೆಳಿಗ್ಗೆ 11.08 ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ’ ಎಂದು ಪೂರ್ವ ಕೇಂದ್ರ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸರಸ್ವತಿ ಚಂದ್ರ ತಿಳಿಸಿದರು.