ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮೀನು ನೀಡುವಾಗ ಆರೋಪಿಯ ಇತಿಹಾಸ ತಿಳಿದುಕೊಳ್ಳಿ: ಸುಪ್ರೀಂ

Last Updated 12 ಸೆಪ್ಟೆಂಬರ್ 2021, 10:35 IST
ಅಕ್ಷರ ಗಾತ್ರ

ನವದೆಹಲಿ: ಜಾಮೀನಿನ ಮೇಲೆ ಆರೋಪಿಯೊಬ್ಬ ಬಿಡುಗಡೆಯಾದರೆ ಆತ ಆ ಅವಧಿಯಲ್ಲಿ ಗಂಭೀರ ಅಪರಾಧಗಳನ್ನು ನಡೆಸಬಹುದೇ ಎಂಬುದನ್ನು ಅಂದಾಜಿಸಲಿಕ್ಕಾಗಿ ಅಂತಹ ವ್ಯಕ್ತಿಯ ಇತಿಹಾಸ ತಿಳಿಯುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್ ಕೊಲೆ ಆರೋಪಿಯೊಬ್ಬನಿಗೆ ಜಾಮೀನು ನೀಡಿದ್ದ ಆದೇಶವೊಂದನ್ನು ರದ್ದುಪಡಿಸಿದ ವೇಳೆ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಎಂ.ಆರ್.ಷಾ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

‘ಜಾಮೀನು ಅರ್ಜಿಗಳನ್ನು ನಿರ್ಧರಿಸುವಾಗ ಆರೋಪದ ಗಹನತೆ ಮತ್ತು ಸಾಕ್ಷ್ಯಗಳೂ ಪ್ರಮುಖವಾಗುತ್ತವೆ. ಆರೋಪ ಸಾಬೀತಾದ ಸಂದರ್ಭದಲ್ಲಿ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸುವಲ್ಲಿಯೂ ಇದು ಮುಖ್ಯವಾಗುತ್ತದೆ’ ಎಂದು ಪೀಠ ಹೇಳಿತು.

ಈ ಹಿಂದಿನ ನಿರ್ಧಾರಗಳನ್ನು ಉಲ್ಲೇಖಿಸಿದ ಪೀಠ, ಜಾಮೀನು ನಿರಾಕರಿಸುವ ಮೂಲಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವುದು ಶಿಕ್ಷೆಯ ಉದ್ದೇಶಕ್ಕಾಗಿ ಅಲ್ಲ, ಬದಲಿಗೆ ನ್ಯಾಯದಾನದಲ್ಲಿನ ಹಲವು ಹಿತಾಸಕ್ತಿಗಳನ್ನು ಈಡೇರಿಸುವುದಕ್ಕಾಗಿರುತ್ತದೆ ಎಂದು ತಿಳಿಸಿತು.

ಯಾವುದೇ ಆರೋಪಿಗೆ ಜಾಮೀನು ನೀಡುವುದಕ್ಕೆ ಮೊದಲು ಆತ ಎಂತಹ ಅಪರಾಧ ಎಸಗಿದ್ದಾನೆ, ಒಂದು ವೇಳೆ ಆರೋಪ ಸಾಬೀತಾದರೆ ಎಂತಹ ಶಿಕ್ಷೆ ಅನುಭವಿಸಬಹುದು, ಪೂರಕ ಸಾಕ್ಷ್ಯಗಳ ಲಕ್ಷಣಳೇನು, ಸಾಕ್ಷ್ಯಗಳನ್ನು ನಾಶಪಡಿಸುವ ಅಥವಾ ತಿರುಚುವ ಸಾಧ್ಯತೆಗಳಿವೆಯೇ, ಕಕ್ಷಿದಾರನಿಗೆ ಬೆದರಿಕೆ ಒಡ್ಡಬಹುದಾದ ಸಾಧ್ಯತೆಗಳಿವಯೇ ಮೊದಲಾದ ವಿಚಾರಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪೀಠ ಹೇಳಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT