ಕರಾಚಿ: ಮುಂದಿನ ವರ್ಷ (2026ರಲ್ಲಿ) ನಡೆಸಲು ಉದ್ದೇಶಿಸಿರುವ ವರ್ಲ್ಡ್ ಕ್ಲಬ್ಸ್ ಟಿ20 ಚಾಂಪಿಯನ್ಷಿಪ್ನಿಂದ (WCC) ಪಾಕಿಸ್ತಾನ ಹೊರಗುಳಿಯುವ ಸಾಧ್ಯತೆ ಇದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷರಾಗಿರುವ ಜಯ್ ಶಾ ಅವರ ಸಹಕಾರದೊಂದಿಗೆ WCC ಆಯೋಜನೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ವಿಶ್ವದ ವಿವಿಧೆಡೆ ನಡೆಯುವ ಟಿ20 ಲೀಗ್ಗಳಲ್ಲಿ ಗೆದ್ದ ತಂಡಗಳು ಇದರಲ್ಲಿ ಭಾಗವಹಿಸಲಿವೆ. ಆದರೆ, ಪಾಕಿಸ್ತಾನ ಸೂಪರ್ ಲೀಗ್ನಲ್ಲಿ (ಪಿಎಸ್ಎಲ್) ಗೆದ್ದ ತಂಡಕ್ಕೆ ಆಹ್ವಾನ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

'ಲಂಡನ್ನಲ್ಲಿ ಕಳೆದ ತಿಂಗಳು ನಡೆದ ಸಭೆಗೆ ಪಿಎಸ್ಎಲ್ನ ಸಿಇಒ ಅವರನ್ನು ಕಳುಹಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಆಹ್ವಾನ ನೀಡಲಾಗಿತ್ತು. ಆದರೆ, ಯಾರೊಬ್ಬರೂ ಸಭೆಯಲ್ಲಿ ಭಾಗವಹಿಸಿರಲಿಲ್ಲ' ಎಂದು ಬೆಳೆವಣಿಗೆಗಳ ಬಗ್ಗೆ ತಿಳಿದಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಐಸಿಸಿ ಬೆಂಬಲದೊಂದಿಗೆ ಇಂಗ್ಲೆಂಡ್ ಅಂಡ್ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ನೇತೃತ್ವದಲ್ಲಿ ನಡೆದ ಸಭೆಗೆ ವಿಶ್ವದ ಪ್ರಮುಖ ಟಿ20 ಫ್ರಾಂಚೈಸ್ಗಳ ಸಿಇಒಗಳು ಹಾಜರಾಗಿದ್ದರು ಎಂದಿರುವ ಅವರು, 'ಪ್ರಸ್ತಾವಿತ WCC ಆಯೋಜನೆ, ಮಾದರಿ, ವೇಳಾಪಟ್ಟಿ, ವಿದೇಶಿ ಆಟಗಾರರಿಗೆ ನಿರಾಕ್ಷೇಪಣಾ ಪತ್ರ ಲಭ್ಯತೆ ಇತ್ಯಾದಿ ವಿಚಾರಗಳ ಬಗ್ಗೆ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಗಿದೆ. ಎಮಿರೇಟ್ಸ್ ಲೀಗ್, ಬಿಗ್ ಬಾಸ್ ಲೀಗ್, ದಿ ಹಂಡ್ರೆಡ್, ಎಸ್ಎ20, ಮೇಜರ್ ಲೀಗ್ ಕ್ರಿಕೆಟ್, ಕೆರಿಬಿಯನ್ ಪ್ರೀಮಿಯರ್ ಲೀಗ್ ಸಿಇಒಗಳು ಹಾಜರಾಗಿದ್ದರು. ಪಾಕಿಸ್ತಾನಕ್ಕೂ ಆಹ್ವಾನ ನೀಡಲಾಗಿತ್ತು' ಎಂದು ಖಚಿತಪಡಿಸಿದ್ದಾರೆ.

'ಪಿಸಿಬಿ ವತಿಯಿಂದ ಯಾರೂ ಸಭೆಗೆ ಹಾಜರಾಗಿಲ್ಲ. ವಿಚಿತ್ರವೆಂದರೆ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೂಡ ಐಸಿಸಿ ಸಭೆಗಳಿಗೆ ನಿಯಮಿತವಾಗಿ ಹಾಜರಾಗುತ್ತಿಲ್ಲ' ಎಂದೂ ಹೇಳಿದ್ದಾರೆ.
.ENG vs IND Test | ಆಂಗ್ಲರಿಗೆ ಆಕಾಶ್ ಆಘಾತ: ಭಾರತಕ್ಕೆ 336 ರನ್ ಜಯ.ತಮಿಳು ಸಿನಿಮಾದಲ್ಲಿ ನಟಿಸಲಿರುವ ಮಾಜಿ ಕ್ರಿಕೆಟಿಗ ಸುರೇಶ್ ರೈನಾ..ಇಲ್ಲಿದೆ ಮಾಹಿತಿ.
ಲೀಗ್ನಲ್ಲಿ ಐಪಿಎಲ್ ಹೊರತುಪಡಿಸಿ ಐದು ತಂಡಗಳು ಪಾಲ್ಗೊಳ್ಳಲಿವೆ ಎನ್ನಲಾಗಿದೆ. ಹಾಗಾಗಿ, ಈ ಬಾರಿ ಐಪಿಎಲ್ನಲ್ಲಿ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಸ್ಪರ್ಧಿಸುವುದು ಅನುಮಾನವಾಗಿದೆ.

'WCCಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಬೆಂಬಲವಿದ್ದರೂ, ಉದ್ಘಾಟನಾ ಆವೃತ್ತಿಯಲ್ಲಿ ಐಪಿಎಲ್ ಭಾಗವಹಿಸುವುದಿಲ್ಲ' ಎಂದು ಅಧಿಕಾರಿ ಹೇಳಿದ್ದಾರೆ.

ಸೌದಿ ಕ್ರಿಕೆಟ್ ಲೀಗ್ಗೆ ಹಿನ್ನಡೆಯುಂಟು ಮಾಡುವ ಸಲುವಾಗಿ WCC ಸಿದ್ಧತೆಯ ವೇಗ ಹೆಚ್ಚಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಹೂಡಿಕೆದಾರರು ಸೌದಿ ಲೀಗ್ಗೆ ಆರಂಭದಲ್ಲೇ ₹ 3,400 ಕೋಟಿ ಹೂಡಿಕೆ ಮಾಡಲು ಸಜ್ಜಾಗಿದ್ದಾರೆ. ಆದರೆ, ಟೆನಿಸ್ ಗ್ರ್ಯಾನ್ಸ್ಲಾಮ್ನಂತೆ ಪ್ರತಿವರ್ಷವೂ ಲೀಗ್ ಆಯೋಜಿಸಲು ಅವರು ಯೋಜಿಸುತ್ತಿರುವುದರಿಂದ ಪ್ರತಿರೋಧ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.