ಹೈದರಾಬಾದ್: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ (ಬಿಬಿವಿ152) ಹೆಚ್ಚು ಸುರಕ್ಷಿತ ಹಾಗೂ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿಯೂ ಸಫಲವಾಗಿದೆ ಎಂಬ ಅಂಶ ಲಸಿಕೆಯ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ಕಂಡುಬಂದಿದೆ.

ಈ ಕುರಿತ ಅಧ್ಯಯನ ವರದಿ ಪ್ರಸಿದ್ಧ ವೈದ್ಯಕೀಯ ನಿಯತಕಾಲಿಕೆ ‘ಲ್ಯಾನ್ಸೆಟ್’ನಲ್ಲಿ ಪ್ರಕಟವಾಗಿದೆ.

‘ಮೊದಲ ಹಂತದ ಟ್ರಯಲ್‌ಗೆ ಹೋಲಿಸಿದಾಗ ಎರಡನೇ ಹಂತದಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಿತ್ತು. ಸುರಕ್ಷತೆಗೆ ಸಂಬಂಧಿಸಿದ ಸ್ಪಂದನೆಯೂ ಉತ್ತಮವಾಗಿತ್ತು’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಕೋವ್ಯಾಕ್ಸಿನ್ ಎರಡನೇ ಹಂತದ ಟ್ರಯಲ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದಿತ್ತು. 380 ಜನ ಕಾರ್ಯಕರ್ತರನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿ ಲಸಿಕೆಯನ್ನು ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.