ನವದೆಹಲಿ: ಕೋವಿಡ್–19ನಿಂದ ದೇಶದಲ್ಲಿ ಸಾವಿಗೀಡಾದವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಬುಧವಾರ 24 ಗಂಟೆಗಳ ಅಂತರದಲ್ಲಿ 4,205 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ, ಕೋವಿಡ್ ದೃಢಪಟ್ಟ 3,48,421 ಹೊಸ ಪ್ರಕರಣಗಳು ದಾಖಲಾಗಿರುವುದು ಕೇಂದ್ರ ಆರೋಗ್ಯ ಸಚಿವಾಲಯದ ಅಪ್ಡೇಟ್ನಿಂದ ತಿಳಿದು ಬಂದಿದೆ.

ಭಾರತದಲ್ಲಿ ಒಟ್ಟು ಕೋವಿಡ್–19 ಪ್ರಕರಣಗಳ ಸಂಖ್ಯೆ 2,33,40,938ಕ್ಕೆ ಏರಿಕೆಯಾಗಿದೆ. ಈ ಪೈಕಿ 1,93,82,642 ಮಂದಿ ಗುಣಮುಖರಾಗಿದ್ದು, 2,54,197 ಜನ ಸಾವಿಗೀಡಾಗಿದ್ದಾರೆ. ಪ್ರಸ್ತುತ ಒಟ್ಟು ಪ್ರಕರಣಗಳಲ್ಲಿ ಶೇ 15.87ರಷ್ಟು, 37,04,099 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿನಿಂದ ಗುಣಮುಖರಾಗುತ್ತಿರುವ ಪ್ರಮಾಣ ಶೇ 83.04 ಹಾಗೂ ಸಾವಿನ ಪ್ರಮಾಣ ಶೇ 1.09ರಷ್ಟಿದೆ.

ಮೇ 4ರಂದು ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2 ಕೋಟಿ ದಾಟಿದೆ. 24 ಗಂಟೆಗಳಲ್ಲಿ 3,55,338 ಮಂದಿ ಗುಣಮುಖರಾಗಿದ್ದಾರೆ. 4,205 ಸಾವಿನ ಪೈಕಿ ಮಹಾರಾಷ್ಟ್ರದಲ್ಲಿ 793, ಕರ್ನಾಟಕದಲ್ಲಿ 480, ದೆಹಲಿಯಲ್ಲಿ 347, ಉತ್ತರ ಪ್ರದೇಶದಲ್ಲಿ 301 ಹಾಗೂ ತಮಿಳುನಾಡಿನಲ್ಲಿ 298 ಮಂದಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ–ಕೋವ್ಯಾಕ್ಸಿನ್ ಲಸಿಕೆ: 2ರಿಂದ 18 ವರ್ಷ ವಯೋಮಾನದವರ ಮೇಲೆ ಕ್ಲಿನಿಕಲ್ ಟ್ರಯಲ್ಗೆ ಶಿಫಾರಸು

ಐಸಿಎಂಆರ್ ಪ್ರಕಾರ, ಮೇ 11ರ ವರೆಗೂ 30,75,83,991 ಮಾದರಿಗಳಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.