ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಿಕೆಟಿಗ ರವೀಂದ್ರ ಜಡೇಜಾ ಬಿಜೆಪಿಗೆ

Published : 6 ಸೆಪ್ಟೆಂಬರ್ 2024, 13:34 IST
Last Updated : 6 ಸೆಪ್ಟೆಂಬರ್ 2024, 13:34 IST
ಫಾಲೋ ಮಾಡಿ
Comments

ಜಾಮ್‌ನಗರ: ಕ್ರಿಕೆಟಿಗ ರವೀಂದ್ರ ಜಡೇಜಾ ಬಿಜೆಪಿ ಸೇರಿದ್ದಾರೆ ಎಂದು ಅವರ ಪತ್ನಿ ಮತ್ತು ಪಕ್ಷದ ಶಾಸಕಿ ರಿವಾಬಾ ಜಡೇಜಾ ತಿಳಿಸಿದ್ದಾರೆ.

‘ಎಕ್ಸ್‌’ನ ತಮ್ಮ ಖಾತೆಯಲ್ಲಿ ರಿವಾಬಾ ಅವರು ‘ಸದಸ್ಯತ್ವ ಅಭಿಯಾನ–2024’ ಹ್ಯಾಶ್‌ಟ್ಯಾಗ್‌ನೊಂದಿಗೆ ರವೀಂದ್ರ ಜಡೇಜಾ ಅವರ ಸದಸ್ಯತ್ವದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಸೆ. 2ರಂದು ತಮ್ಮ ಸದಸ್ಯತ್ವವನ್ನು ನವೀಕರಿಸುವ ಮೂಲಕ ಬಿಜೆಪಿಯ ಸದಸ್ಯತ್ವ ಅಭಿಯಾನಕ್ಕೆ ರಾಷ್ಟ್ರವ್ಯಾಪಿ ಚಾಲನೆ ನೀಡಿದ ಸಂದರ್ಭ, ಜಡೇಜಾ ಸಹ ಪಕ್ಷದ ಸದಸ್ಯತ್ವ ಪಡೆದರು ಎಂದು ಶಾಸಕರು ಸುದ್ದಿಗಾರರಿಗೆ ತಿಳಿಸಿದರು.

‘ಬಿಜೆಪಿಯ ಸದಸ್ಯರಾಗುವಂತೆ ಇತರರನ್ನು ಕೇಳುವುದಕ್ಕೂ ಮೊದಲು, ನಮ್ಮ ಕುಟುಂಬದ ಸದಸ್ಯರನ್ನು ಪಕ್ಷದ ಸದಸ್ಯರನ್ನಾಗಿಸುವುದು ಉತ್ತಮ. ಇತರರು ಅನುಸರಿಸಲು ಇದು ಪ್ರೇರಣೆಯಾಗಲಿದೆ. ಆದ್ದರಿಂದ ಜಾಮ್‌ನಗರಲ್ಲಿ ನನ್ನ ಪತಿಯನ್ನು ಸದಸ್ಯರನ್ನಾಗಿಸುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದೇನೆ’ ಎಂದು ರಿವಾಬ್‌ ಹೇಳಿದರು.

2019ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ರಿವಾಬ್ ಜಡೇಜಾ, 2022ರ ಚುನಾವಣೆಯಲ್ಲಿ ಜಾಮ್‌ನಗರ ಉತ್ತರ ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯನ್ನು 50 ಸಾವಿರ ಮತಗಳಿಂದ ಸೋಲಿಸಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಜೂನ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಜಯಿಸಿದ ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಆಟಗಾರರಾಗಿದ್ದ ರವೀಂದ್ರ ಜಡೇಜಾ, ಚುಟುಕು ಕ್ರಿಕೆಟ್‌ಗೆ ಆ ಸಂದರ್ಭವೇ ನಿವೃತ್ತಿ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT