ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾ ನದಿಯ ಪ್ರವಾಹ; ಹರಿದ್ವಾರದಲ್ಲಿ ಮೊಸಳೆಗಳು ಪ್ರತ್ಯಕ್ಷ

Published 19 ಜುಲೈ 2023, 13:28 IST
Last Updated 19 ಜುಲೈ 2023, 13:28 IST
ಅಕ್ಷರ ಗಾತ್ರ

ಹರಿದ್ವಾರ (ಉತ್ತರಾಖಂಡ): ಗಂಗಾ ನದಿಯ ಪ್ರವಾಹಕ್ಕೆ ತುತ್ತಾಗಿದ್ದ ಹರಿದ್ವಾರ ಜಿಲ್ಲೆಯ ಲಕ್ಸರ್‌ ಹಾಗೂ ಖಾನ್‌ಪುರ ಪ್ರದೇಶಗಳಲ್ಲಿ  ಮೊಸಳೆಗಳು ಕಾಣಿಸಿಕೊಂಡಿದ್ದು, ಜನರು ಭಯಭೀತರಾಗಿದ್ದಾರೆ. ಮೊಸಳೆಗಳು ವಸತಿ ಪ್ರದೇಶಗಳಲ್ಲೂ ಕಾಣಿಸಿಕೊಂಡಿವೆ.

ಗಂಗಾನದಿ ಮತ್ತು ಅದರ ಉಪನದಿಗಳಾದ ಬಾನ್ ಗಂಗಾ ಮತ್ತು ಸೋನಾಲಿ ನದಿಗಳ ಪ್ರವಾಹದೊಂದಿಗೆ ಬರುತ್ತಿರುವ ಮೊಸಳೆಗಳನ್ನು ಅರಣ್ಯ ಇಲಾಖೆ ಹಿಡಿದು ಮತ್ತೆ ನದಿಗಳಿಗೆ ಬಿಡುತ್ತಿದೆ.

‘ಜನವಸತಿ ಪ್ರದೇಶಗಳಿಂದ ಇಲ್ಲಿಯವರೆಗೆ ಸುಮಾರು 12 ಮೊಸಳೆಗಳನ್ನು ಹಿಡಿಯಲಾಗಿದೆ. ಅಲ್ಲದೇ ಲಕ್ಸರ್‌ ಹಾಗೂ ಖಾನ್‌ಪುರ ಪ್ರದೇಶಗಳಲ್ಲಿ ಮೊಸಳೆ ಹಿಡಿಯಲೆಂದೇ ಇಲಾಖೆ ವತಿಯಿಂದ 25 ಮಂದಿ ಸಿಬ್ಬಂದಿಯ ತಂಡವೊಂದನ್ನು ನಿಯೋಜಿಸಲಾಗಿದೆ. ಅವರು ಯಾವ ಸಮಯದಲ್ಲಾದರೂ ಲಭ್ಯರಿರುತ್ತಾರೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT