ಕಡಿಮೆ ದೂರದ ಪ್ರಯಾಣಕ್ಕೆ ದ್ವಿಚಕ್ರ ವಾಹನಗಳು ಮತ್ತು ಕಾರುಗಳನ್ನು ಬಳಸುವುದರ ಬದಲಿಗೆ ಸೈಕಲ್ ಬಳಸಿದರೆ ದೇಶಕ್ಕೆ ವಾರ್ಷಿಕ ₹ 1.8 ಲಕ್ಷ ಕೋಟಿಯಷ್ಟು ಲಾಭವಾಗುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ದಿ ಎನರ್ಜಿ ಅಂಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ (ಟೆರಿ)ಶುಕ್ರವಾರ ಬಿಡುಗಡೆ ಮಾಡಿರುವ ‘ಭಾರತದಲ್ಲಿ ಸೈಕಲ್ ಬಳಕೆಯ ಲಾಭಗಳು: ಆರ್ಥಿಕ, ಪರಿಸರ ಮತ್ತು ಸಾಮಾಜಿಕ ವಿಶ್ಲೇಷಣೆ’ ಅಧ್ಯಯನದ ವರದಿಯಲ್ಲಿ ಈ ಮಾಹಿತಿ ಇದೆ.

* ₹ 1.8 ಲಕ್ಷ ಕೋಟಿ: ಸೈಕಲ್ ಬಳಕೆಯಿಂದ ದೇಶಕ್ಕೆ ಆಗುವ ವಾರ್ಷಿಕ ಲಾಭ

ಅರಿವು ಮೂಡಿಸುವಿಕೆ
ಸೈಕಲ್ ಬಳಕೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ‘ಸೈಕಲ್ ಬಡವರ ಸಾರಿಗೆ’ ಎಂಬ ಅಭಿಪ್ರಾಯ ಈಗಲೂ ಜನಜನಿತವಾಗಿದೆ. ಅದನ್ನು ಹೋಗಲಾಡಿಸಬೇಕಿದೆ. ಇದಕ್ಕಾಗಿ ಸರ್ಕಾರಗಳು ಅಭಿಯಾನ ನಡೆಸಬೇಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಉತ್ತೇಜನಕ್ಕೆ ಸಲಹೆ
ನಗರಗಳ ದೈನಂದಿನ ಜೀವನದಲ್ಲಿ ಸೈಕಲ್ ಬಳಕೆಗೆ ಹಲವು ತೊಡಕುಗಳಿವೆ. ಇದರ ಮಧ್ಯೆಯೂ ಸೈಕಲ್ ಬಳಕೆಯನ್ನು ಉತ್ತೇಜಿಸಲು ಹಲವು ಕ್ರಮಗಳನ್ನು ಟೆರಿ ಸೂಚಿಸಿದೆ.

* ಸುರಕ್ಷಿತ ಸೈಕಲ್ ಸವಾರಿಗೆ ಅನುಕೂಲವಾಗುವಂತೆ ರಸ್ತೆ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಮಾರ್ಪಾಡು ಮಾಡಬೇಕು.

* ಆಯಾ ನಗರದ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿರುವ ‘ಸೈಕಲ್ ಶೇರಿಂಗ್’ ಅನ್ನು ಇಡೀ ನಗರಕ್ಕೆ ವಿಸ್ತರಿಸಬೇಕು.

* ಮಾಲಿನ್ಯ ಸೆಸ್, ಪಾರ್ಕಿಂಗ್ ಶುಲ್ಕಗಳನ್ನು ಹೆಚ್ಚಿಸುವ ಮೂಲಕ ಕಾರು–ದ್ವಿಚಕ್ರವಾಹನಗಳ ಅನಗತ್ಯ ಬಳಕೆಯನ್ನು ನಿಯಂತ್ರಿಸಬೇಕು.

* ಕೆಳವರ್ಗದ ಜನರಿಗೆ ಸೈಕಲ್ ಈಗಲೂ ಕೈಗೆಟುಕುತ್ತಿಲ್ಲ. ಹೀಗಾಗಿ ಸಾಮಾನ್ಯ ಸೈಕಲ್‌ಗಳ ಬೆಲೆಯನ್ನು ಇಳಿಸಬೇಕು. ಇದಕ್ಕಾಗಿ ₹ 5,000ಕ್ಕಿಂತಲೂ ಕಡಿಮೆ ಬೆಲೆಯ ಸೈಕಲ್‌ಗಳ ಮೇಲಿನ ಜಿಎಸ್‌ಟಿಯನ್ನು ಶೇ 12ರಿಂದ ಶೇ 5ಕ್ಕೆ ಇಳಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.