ಚಂಡಮಾರುತದ ಪರಿಣಾಮ ಹೆಚ್ಚಾಗಿರುವ, ಕಛ್ ಕಡಲತೀರದಿಂದ 10 ಕಿ.ಮೀ ಪ್ರದೇಶಗಳಲ್ಲಿನ, 120 ಹಳ್ಳಿಗಳ 74,000 ಜನರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಅತ್ಯಂತ ತೀವ್ರ’ಸ್ವರೂಪ ಪಡೆದುಕೊಂಡಿರುವ ಬಿಪೊರ್‌ಜಾಯ್ ಜಖೌ ಬಂದರಿನ ಬಳಿ ಭೂಪ್ರದೇಶಕ್ಕೆ ಅಪ್ಪಳಿಸಲಿದೆ. ಗಾಳಿಯ ವೇಗ ಗಂಟೆಗೆ ಗರಿಷ್ಠ 150 ಕಿಲೋಮೀಟರ್ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಚಂಡಮಾರುತ ಕರಾವಳಿಯನ್ನು ಸಮೀಪಿಸುತ್ತಿದ್ದಂತೆ ಮಳೆಯ ತೀವ್ರತೆಯು ಹೆಚ್ಚಾಗುತ್ತದೆ. ಕಛ್, ದೇವಭೂಮಿ ದ್ವಾರ್ಕಾ ಮತ್ತು ಜಾಮ್‌ನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.