ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೀವ್ರ ಸ್ವರೂಪ ಪಡೆಯುತ್ತಿರುವ ಬಿಪರ್‌ಜಾಯ್ ಚಂಡಮಾರುತ

Published : 7 ಜೂನ್ 2023, 5:48 IST
Last Updated : 7 ಜೂನ್ 2023, 5:48 IST
ಫಾಲೋ ಮಾಡಿ
Comments

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಈ ವರ್ಷ ಎದ್ದಿರುವ ಮೊದಲ ಚಂಡಮಾರುತ 'ಬಿಪರ್‌ಜಾಯ್' ತೀವ್ರ ಸ್ವರೂಪ ಪಡೆಯುತ್ತಿದ್ದು, ಇದರಿಂದ ಕೇರಳದಲ್ಲಿ ಅಲ್ಪ ಪ್ರಮಾಣದ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಶಾಸ್ತ್ರಜ್ಞರು ಹೇಳಿದ್ದಾರೆ.

‘ಪೂರ್ವ-ಮಧ್ಯ ಮತ್ತು ಸಮೀಪದ ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಬಿಪರ್‌ಜಾಯ್ ಚಂಡಮಾರುತವು ಕಳೆದ ಆರು ಗಂಟೆಗಳಲ್ಲಿ ಸುಮಾರು 2 ಕಿಲೋಮೀಟರ್ ವೇಗದಲ್ಲಿ ಉತ್ತರದ ಕಡೆಗೆ ಚಲಿಸಿದೆ.

24 ಗಂಟೆಗಳಲ್ಲಿ ಇದು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸೈಕ್ಲೋನ್ ಬಿಪರ್‌ಜಾಯ್ ಮಂಗಳವಾರ ಬೆಳಿಗ್ಗೆಯಿಂದ ತೀವ್ರಗೊಂಡಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಅಡಿಯಲ್ಲಿ ಬರುವ ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರಗಳ ಉಷ್ಣವಲಯದ ಚಂಡಮಾರುತಗಳ ಮುನ್ಸೂಚನೆಗಳನ್ನು ನೀಡುವ ಜವಾಬ್ದಾರಿ ಹೊತ್ತಿರುವ ಜಂಟಿ ಟೈಫೂನ್ ಎಚ್ಚರಿಕೆ ಕೇಂದ್ರ (ಜೆಟಿಡಬ್ಲ್ಯುಸಿ) ಹೇಳಿದೆ.

ಹವಾಮಾನ ಬದಲಾವಣೆಯಿಂದಾಗಿ ಬಂಗಾಳಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ಚಂಡಮಾರುತಗಳು ವೇಗವಾಗಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿವೆ ಹಾಗೂ ದೀರ್ಘಕಾಲದವರೆಗೆ ತಮ್ಮ ತೀವ್ರತೆಯನ್ನು ಉಳಿಸಿಕೊಳ್ಳುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

'ಉತ್ತರ ಹಿಂದೂ ಮಹಾಸಾಗರದ ಮೇಲಿನ ಉಷ್ಣವಲಯದ ಚಂಡಮಾರುತಗಳ ಸ್ಥಿತಿ ಬದಲಾವಣೆ' ಎಂಬ ಅಧ್ಯಯನದ ಪ್ರಕಾರ, ಅರೇಬಿಯನ್ ಸಮುದ್ರದಲ್ಲಿ 1982-2019ರ ಅವಧಿಯಲ್ಲಿ ಚಂಡಮಾರುತದ ತೀವ್ರತೆ, ಆವರ್ತನ ಮತ್ತು ಅವಧಿಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT