ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೋಜಶಾಲಾದಲ್ಲಿ 5– 6 ಅಡಿ ಆಳದ ಕಂದಕ ಅಗೆದ ಸರ್ವೇಕ್ಷಣ ಇಲಾಖೆ

Published 28 ಮಾರ್ಚ್ 2024, 13:30 IST
Last Updated 28 ಮಾರ್ಚ್ 2024, 13:30 IST
ಅಕ್ಷರ ಗಾತ್ರ

ಧರ್‌: ಮಧ್ಯ ಪ್ರದೇಶದ ವಿವಾದಿತ ಭೋಜಶಾಲಾ/ಕಮಲ ಮೌಲಾ ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆಯ 7ನೇ ದಿನವಾದ ಗುರುವಾರವೂ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ (ಎಎಸ್‌ಐ) ಸಮೀಕ್ಷೆ ಮುಂದುವರೆಯಿತು. 

ಮಧ್ಯಪ್ರದೇಶದ ಹೈಕೋರ್ಟ್‌ ಆದೇಶದ ಮೇರೆಗೆ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಧ್ಯಪ್ರದೇಶದ ಧರ್‌ ಜಿಲ್ಲೆಯಲ್ಲಿರುವ ಮಸೀದಿಯಲ್ಲಿ ಎಎಸ್‌ಐ ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷೆಯ ಭಾಗವಾಗಿ ಗುರುವಾರ ಮಸೀದಿಯ ಸಂಕೀರ್ಣದ ಹಿಂದೆ 5ರಿಂದ 6 ಅಡಿಗಳಷ್ಟು ಆಳದ ಕಂದಕಗಳನ್ನು ಅಗೆಯಲಾಗಿದೆ. 

ಸಮೀಕ್ಷೆಯಲ್ಲಿ ಆಶಿಶ್‌ ಗೋಯಲ್‌, ಗೋಪಾಲ್‌ ಶರ್ಮಾ ಮತ್ತು ಅಬ್ದುಲ್‌ ಸಮದ್‌ ಅವರು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳನ್ನು ಪ್ರತಿನಿಧಿಸುತ್ತಿದ್ದಾರೆ. ಈ ಮಸೀದಿಯ ಸಂಕೀರ್ಣದಲ್ಲಿ ಹಿಂದೆ ವಾಗ್ದೇವಿ ದೇವಿಯ ದೇವಸ್ಥಾನವಿತ್ತು ಎಂದು ಹಿಂದೂಗಳು ನಂಬಿದ್ದಾರೆ. ಇದು ಕಮಲ ಮೌಲಾ ಮಸೀದಿಯಾಗಿದೆ ಎನ್ನುವುದು ಮುಸ್ಲಿಂ ಸಮುದಾಯದವರ ನಂಬಿಕೆ. ಹೀಗಾಗಿ ವಿವಾದಿತ ಸ್ಥಳದಲ್ಲಿ ಆರು ವಾರಗಳೊಳಗಾಗಿ ವೈಜ್ಞಾನಿಕ ಸಮೀಕ್ಷೆ ನಡೆಸಿ, ವರದಿ ನೀಡುವಂತೆ ಎಎಸ್ಐಗೆ ಹೈಕೋರ್ಟ್‌ ಆದೇಶಿಸಿದೆ. 

ಸದ್ಯ ಭೋಜಶಾಲಾ ಸಂಕೀರ್ಣದಲ್ಲಿ ಪ್ರತಿ ಮಂಗಳವಾರ ಹಿಂದೂಗಳು ಪೂಜೆ ಸಲ್ಲಿಸುತ್ತಿದ್ದು, ಶುಕ್ರವಾರ ಮುಸ್ಲಿಮರು ಪ್ರಾರ್ಥನೆ ಮಾಡುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT