ಜೈಪುರ: ರಾಜಸ್ಥಾನದಲ್ಲಿ ಅಡುಗೆ ಅನಿಲ ತುಂಬಿದ್ದ ಟ್ಯಾಂಕರ್ವೊಂದು ಶುಕ್ರವಾರ(ಡಿ.20) ಹಲವು ವಾಹನಗಳಿಗೆ ಗುದ್ದಿದ ಪರಿಣಾಮ ಅಗ್ನಿ ಅವಘಡ ಸಂಭವಿಸಿದ್ದು, ಮೃತರ ಸಂಖ್ಯೆ 18 ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿರುವ ಸುಮಾರು 15ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೈಪುರ –ಅಜ್ಮೇರ್ ಹೆದ್ದಾರಿಯಲ್ಲಿ ಶಾಲೆಯೊಂದರ ಮುಂದೆ ಅವಘಡ ಸಂಭವಿಸಿದೆ. 30ಕ್ಕೂ ಅಧಿಕ ವಾಹನಗಳು ಬೆಂಕಿಗಾಹುತಿಯಾಗಿವೆ.
.ಜಲ ಸಂಪನ್ಮೂಲ ಅಭಿವೃದ್ಧಿ: ಅಂಬೇಡ್ಕರ್ ಕೊಡುಗೆ ಮರೆತ ಕಾಂಗ್ರೆಸ್; ಪ್ರಧಾನಿ ಮೋದಿ.ಕಾಲ್ತುಳಿತ: ಮೃತ ಮಹಿಳೆ ಕುಟುಂಬಕ್ಕೆ ₹2 ಕೋಟಿ ನೀಡಿದ ಅಲ್ಲು ಅರ್ಜುನ್,ನಿರ್ಮಾಪಕರು.
‘ಅಪಘಾತದಲ್ಲಿ ಟ್ಯಾಂಕರ್ನ ಪೈಪ್ಗೆ ಹಾನಿಯಾದ ಕಾರಣ ಅಡುಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಘಡ ಸಂಭವಿಸಿದೆ. ಟ್ಯಾಂಕರ್ ಹಿಂದೆ ನಿಂತಿದ್ದ, ಎದುರಿನಿಂದ ಬರುತ್ತಿದ್ದ ಮತ್ತು ಅಪಘಾತಗೊಂಡ ವಾಹನಗಳು ಬೆಂಕಿಗಾಹುತಿಯಾಗಿವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.

ಅಪಘಾತದಲ್ಲಿ ಗಾಯಗೊಂಡಿರುವ ಹೆಚ್ಚಿನವರು ಇಲ್ಲಿನ ಎಸ್ಎಂಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೃತರ ಕುಟುಂಬದವರಿಗೆ ತಲಾ ₹2 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ ಮೂಲಕ ತಿಳಿಸಿದ್ದರು.

ರಾಜಸ್ಥಾನ ಸರ್ಕಾರವು ಮೃತರ ಕುಟುಂಬಕ್ಕೆ ₹5 ಲಕ್ಷ ಮತ್ತು ಗಾಯಗೊಂಡವರಿಗೆ ₹1 ಲಕ್ಷ ಪರಿಹಾರ ಘೋಷಿಸಿದೆ.
.ಉತ್ತರ ಪ್ರದೇಶ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ.36 ವರ್ಷಗಳ ಬಳಿಕ ರಶ್ದಿ ಅವರ ‘ಸಟಾನಿಕ್ ವರ್ಸಸ್’ ಪುಸ್ತಕ ದೆಹಲಿಯಲ್ಲಿ ಮಾರಾಟ.ಮಹರೌಲಿ ಉದ್ಯಾನದಲ್ಲಿರುವ ಕಟ್ಟಡಗಳಿಗೆ ಧಾರ್ಮಿಕ ಮಹತ್ವ: ಎಎಸ್ಐ.ಅಫಜಲಪುರ: ಟಿಟಿ–ಲಾರಿ–ಬೈಕ್ ನಡುವೆ ಅಪಘಾತ: ಮೂವರ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.