ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಈ ಬಾರಿಯ ವಿದ್ಯಾರ್ಥಿಗಳ ಜತೆಗಿನ ಪರೀಕ್ಷಾ ಪೇ ಚರ್ಚಾ (ಪಿಪಿಸಿ) ವಿಭಿನ್ನವಾಗಿರಲಿದ್ದು, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸದ್ಗುರು ವಾಸುದೇವ್ ಜಗ್ಗಿ ಮತ್ತು ಬಾಕ್ಸರ್ ಮೇರಿ ಕೋಮ್ ಸೇರಿದಂತೆ ಹಲವು ಖ್ಯಾತನಾಮರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಪರೀಕ್ಷಾ ಪೇ ಚರ್ಚಾದ 8ನೇ ಆವೃತ್ತಿಯಲ್ಲಿ ಪ್ಯಾರಾ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಅವನಿ ಲೇಖರಾ, ಬ್ಯಾಡ್ಮಿಂಟನ್ ಆಟಗಾರ ಸುಹಾಸ್ ಯತಿರಾಜ್, ಪೌಷ್ಟಿಕ ಆಹಾರ ತಜ್ಞರಾದ ರುಜುತಾ ದಿವೇಕರ್, ಸೋನಾಲಿ ಸಬರ್ವಾಲ್, ರೇವಂತ್ ಹಿಮತ್ಸಿಂಕಾ, ನಟ ವಿಕ್ರಾಂತ್ ಮಾಸ್ಸೆ, ನಟಿ ಭೂಮಿ ಪೆಡ್ನೇಕರ್, ಯೂಟ್ಯೂಬರ್ ರಾಧಿಕಾ ಗುಪ್ತಾ ಕೂಡ ಪಾಲ್ಗೊಳ್ಳಲಿದ್ದಾರೆ. ಈ ಚರ್ಚೆಯಲ್ಲಿ 100 ವಿದ್ಯಾರ್ಥಿಗಳ ಗುಂಪಿನೊಂದಿಗೆ ಇವರು ಜೀವನ ಮತ್ತು ಕಲಿಕೆಯ ಪ್ರಮುಖ ಅಂಶಗಳ ಕುರಿತು ತಮ್ಮ ಅನುಭವಗಳು ಮತ್ತು ತಿಳಿವಳಿಕೆಯನ್ನು ಹಂಚಿಕೊಳ್ಳಲಿದ್ದಾರೆ.

ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ಟೌನ್ ಹಾಲ್ ಸ್ವರೂಪದ ಬದಲಾಗಿ, ಈ ವರ್ಷ 35 ವಿದ್ಯಾರ್ಥಿಗಳನ್ನು ದೆಹಲಿಯ ಸುಂದರ್ ನರ್ಸರಿಗೆ ಕರೆದೊಯ್ದು, ಅವರೊಂದಿಗೆ ಪರೀಕ್ಷೆಗಳು ಮತ್ತು ಒತ್ತಡ ನಿರ್ವಹಣೆಗೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಸಂವಹನ ನಡೆಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದೇ 10 ರಂದು ನಿಗದಿಯಾಗಿರುವ ಪಿಪಿಸಿ, ಎಂಟು ಸಂಚಿಕೆಗಳನ್ನು ಒಳಗೊಂಡಿರಲಿದೆ. ಅಲ್ಲಿ ಈ ತಜ್ಞರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಪ್ರಧಾನಿಯವರೊಂದಿಗಿನ ಮೊದಲ ಸಂವಾದವು ದೂರದರ್ಶನ, ಸ್ವಯಂ, ಸ್ವಯಂ ಪ್ರಭಾ, ಪಿಎಂಒ ಯೂಟ್ಯೂಬ್ ಚಾನೆಲ್ ಹಾಗೂ ಶಿಕ್ಷಣ ಮತ್ತು ಮಾಹಿತಿ ಸಚಿವಾಲಯಗಳ ಸಾಮಾಜಿಕ ಮಾಧ್ಯಮ ಚಾನೆಲ್ಗಳಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.

ಪರೀಕ್ಷಾ ಪೇ ಚರ್ಚಾ ಮತ್ತೆ ಬಂದಿದೆ. ಇದು ತಾಜಾ ಮತ್ತು ಲವಲವಿಕೆಯ ಸ್ವರೂಪದಲ್ಲಿದೆ. ಇದು ಒತ್ತಡ ರಹಿತ ಪರೀಕ್ಷೆಗಳ ವಿಭಿನ್ನ ಅಂಶಗಳನ್ನು ಒಳಗೊಂಡ 8 ಅತ್ಯಂತ ಆಸಕ್ತಿದಾಯಕ ಕಂತುಗಳನ್ನು ಒಳಗೊಂಡಿದೆ. ಪರೀಕ್ಷಾರ್ಥಿಗಳು ಪೋಷಕರು ಹಾಗೂ ಶಿಕ್ಷಕರು ಇದನ್ನು ವೀಕ್ಷಿಸಿ
ನರೇಂದ್ರ ಮೋದಿ ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.