ನವದೆಹಲಿ: ಈ ವಾರದ ಆರಂಭದಲ್ಲಿ ಕೆಂಪು ಕೋಟೆ ಬಳಿ ಸ್ಫೋಟಗೊಂಡ ಹುಂಡೈ ಐ20 ಕಾರಿನ ಚಾಲಕನಿಗೆ ಅಕ್ರಮ ಹಣಕಾಸಿನ ಮಾರ್ಗಗಳ ಮೂಲಕ ₹20 ಲಕ್ಷ ಬಂದಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವರದಿ ಮಾಡಿದೆ.

ಮೂಲಗಳ ಪ್ರಕಾರ, ಆರೋಪಿ ಉಮರ್ ಮೊಹಮ್ಮದ್ ಅಲಿಯಾಸ್ ಉಮರ್ ನಬಿ ಹರಿಯಾಣದ ನುಹ್ನ ಮಾರುಕಟ್ಟೆಯಲ್ಲಿ ನಗದು ರೂಪದಲ್ಲಿ ಹಣ ಪಾವತಿಸಿ ದೊಡ್ಡ ಪ್ರಮಾಣದಲ್ಲಿ ರಸಗೊಬ್ಬರಗಳನ್ನು ಖರೀದಿಸಿದ್ದಾನೆ. ಅದನ್ನು ಬಳಸಿಯೇ ಸ್ಫೋಟ ಸಿದ್ಧಪಡಿಸಿದ್ದಾನೆ.

ಸೋಮವಾರ ಸಂಜೆ, ಕೆಂಪು ಕೋಟೆ ಬಳಿ ಬಿಳಿ ಹುಂಡೈ ಐ20 ಸ್ಫೋಟಗೊಂಡು 13 ಮಂದಿ ಮೃತಪಟ್ಟು, 20 ಜನರು ಗಾಯಗೊಂಡಿದ್ದರು. ಸ್ಫೋಟದ ಪರಿಣಾಮ ಎಷ್ಟು ತೀವ್ರವಾಗಿತ್ತು ಎಂದರೆ ಹತ್ತಿರದ ಹಲವಾರು ವಾಹನಗಳು ಹಾನಿಗೊಳಗಾಗಿದ್ದವು.

ಪ್ರಕರಣ ಸಂಬಂಧ ಎನ್ಐಎ ಹರಿಯಾಣ ಮೂಲದ ಮೂವರನ್ನು ಬಂಧಿಸಿದೆ.

ದೆಹಲಿ ಸ್ಫೋಟ ಪ್ರಕರಣದ ಆರೋಪಿಗಳು ‘ಇಮೇಲ್–ಡ್ರಾಫ್ಟ್’ ವಿಧಾನದ ಮೂಲಕ ಸಂವಹನ ನಡೆಸುತ್ತಿದ್ದರು ಎಂಬ ಮಾಹಿತಿ ವಿಚಾರಣೆ ವೇಳೆ ತಿಳಿದುಬಂದಿದೆ.

ಇಮೇಲ್ನಲ್ಲಿ ಸಂದೇಶ ಬರೆದು, ಚಿತ್ರ, ವಿಡಿಯೊಗಳನ್ನು ಅಪ್ಲೋಡ್ ಮಾಡಿ, ಅದನ್ನು ಸಂಬಂಧಿಸಿದ ವ್ಯಕ್ತಿಯ ಇಮೇಲ್ಗೆ ಕಳುಹಿಸುವ ಬದಲು ಡ್ರಾಫ್ಟ್ ಫೋಲ್ಡರ್ನಲ್ಲೇ ಉಳಿಸುತ್ತಿದ್ದರು. ಭದ್ರತಾ ಸಂಸ್ಥೆಗಳ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಮತ್ತು ಸಂವಹನದ ಮೂಲವನ್ನು ಸುಲಭವಾಗಿ ಪತ್ತೆಹಚ್ಚಬಾರದು ಎಂಬ ಕಾರಣಕ್ಕೆ ಈ ವಿಧಾನ ಅನುಸರಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಆರೋಪಿಗಳಾದ ಅಲ್– ಫಲಾಹ್ ವಿಶ್ವವಿದ್ಯಾಲಯದ ಡಾ. ಉಮರ್ ನಬಿ, ಡಾ. ಮುಜಮ್ಮಿಲ್ ಗನಿ ಮತ್ತು ಡಾ. ಶಾಹೀನ್ ಶಾಹಿದ್ ಅವರು ಸಂವಹನಕ್ಕಾಗಿ ಒಂದೇ ಇಮೇಲ್ ಖಾತೆಯನ್ನು ಬಳಸುತ್ತಿದ್ದರು. ಈ ಖಾತೆಯ ‘ಇಮೇಲ್ ಡ್ರಾಫ್ಟ್’ನಲ್ಲಿರುವ ಸಂದೇಶಗಳು ನೆಟ್ವರ್ಕ್ ಮೂಲಕ ರವಾನೆಯಾಗುತ್ತಿರಲಿಲ್ಲ. ಹೀಗಾಗಿ ಆರೋಪಿಗಳ ನಡುವಿನ ಸಂವಹನ ವಿಧಾನವನ್ನು ಪತ್ತೆ ಹಚ್ಚುವುದು ಸವಾಲಾಗಿತ್ತು. ಇಮೇಲ್ ಡ್ರಾಫ್ಟ್ ಜತೆಗೆ ಚಿತ್ರ, ನಕ್ಷೆ, ಲೊಕೇಶನ್ ವಿವರವನ್ನು ಹಂಚಿಕೊಳ್ಳಲು ’ತ್ರೀಮಾ’ ಎಂಬ ಗೂಢಲಿಪಿಯ ಇನ್ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಷನ್ ಬಳಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.