ನವದೆಹಲಿ: ರಾಜಿಂದರ್ ನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ದುರ್ಗೇಶ್ ಪಾಠಕ್ ಅವರು ಗೆಲುವು ದಾಖಲಿಸಿದ್ದಾರೆ.

ಪಾಠಕ್ ಅವರು ಬಿಜೆಪಿಯ ಅಭ್ಯರ್ಥಿ ರಾಜೇಶ್ ಭಾಟಿಯಾ ವಿರುದ್ಧ 11,000ಕ್ಕೂ ಹೆಚ್ಚು ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕೃತ ಮಾಹಿತಿಯ ಪ್ರಕಾರ ಎಎಪಿಯ ಪಾಠಕ್ ಅವರು 40,319 ಮತಗಳನ್ನು ಗಳಿಸಿದ್ದಾರೆ. ಅವರ ನಿಕಟ ಸ್ಪರ್ಧಿ ಭಾಟಿಯಾ 28,851 ಮತಗಳನ್ನು ಗಳಿಸಿದರು.

ಈ ಮೂಲಕ 11,468 ಮತಗಳ ಅಂತರದಲ್ಲಿ ಭಾಟಿಯಾ ಅವರನ್ನು ಸೋಲಿಸಿದ್ದಾರೆ. ಕಾಂಗ್ರೆಸ್‌ನ ಪ್ರೇಮಲತಾ ಅವರಿಗೆ 2,014 ಮತಗಳು ಮಾತ್ರ ದೊರಕಿದವು.

ಜೂನ್ 23ರಂದು ನಡೆದ ಉಪಚುನಾವಣೆಯಲ್ಲಿ ಶೇ 43.75ರಷ್ಟು ಮತದಾನವಾಗಿತ್ತು. ಭಾರಿ ಭದ್ರತೆಯ ನಡುವೆ ಇಂದು ಬೆಳಿಗ್ಗೆ 8ಕ್ಕೆ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.