ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶ ಪ್ರವಾಸ: ಕಾರ್ತಿ ಚಿದಂಬರಂಗೆ ಕೋರ್ಟ್‌ ಅನುಮತಿ

Last Updated 4 ಏಪ್ರಿಲ್ 2023, 14:21 IST
ಅಕ್ಷರ ಗಾತ್ರ

ನವದೆಹಲಿ: ಸಿಬಿಐ ಮತ್ತು ಇ.ಡಿ ದಾಖಲಿಸಿರುವ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕಾಂಗ್ರೆಸ್‌ ನಾಯಕ ಕಾರ್ತಿ ಪಿ.ಚಿದಂಬರಂ ಅವರಿಗೆ ಏಪ್ರಿಲ್‌ನಲ್ಲಿ ವಿದೇಶ ಪ್ರವಾಸ ತೆರಳಲು ಇಲ್ಲಿನ ನ್ಯಾಯಾಲಯವೊಂದು ಮಂಗಳವಾರ ಅನುಮತಿ ನೀಡಿದೆ.

ಕಾರ್ತಿ ಅವರು ಏಪ್ರಿಲ್‌ 9 ರಿಂದ 22ರವರೆಗೆ ಮೊನಾಕೊ, ಸ್ಪೇನ್‌, ಬ್ರಿಟನ್‌ಗೆ ಪ್ರವಾಸ ತೆರಳಲು ವಿಶೇಷ ನ್ಯಾಯಾಧೀಶರಾದ ಎಂ.ಕೆ.ನಾಗಪಾಲ್‌ ಅನುಮತಿ ನೀಡಿದರು. ಕೋರ್ಟ್‌ ವಿಧಿಸಿರುವ ಷರತ್ತುಗಳಿಗೆ ಬದ್ಧರಾಗಿರಬೇಕು ಎಂದೂ ಸೂಚಿಸಿದರು.

ಏರ್‌ಸೆಲ್‌ ಮ್ಯಾಕ್ಸಿಸ್‌ ಹಗರಣ ಮತ್ತು ಐಎನ್‌ಎಕ್ಸ್‌ ಮೀಡಿಯಾ ಹಗರಣದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಎರಡು ಪ್ರಕರಣ ಮತ್ತು ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿ ಇ.ಡಿ ದಾಖಲಿಸಿರುವ ಎರಡು ಪ್ರಕರಣಗಳಲ್ಲಿ ಇವರು ಆರೋಪಿಯಾಗಿದ್ದಾರೆ.

"ಮೊನಾಕೊದಲ್ಲಿ ಟೆನಿಸ್‌ ಟೂರ್ನಮೆಂಟ್‌ ಇದ್ದು, ಟೊಟುಸ್‌ ಟೆನಿಸ್‌ ಲಿಮಿಟೆಡ್‌ ಸಂಸ್ಥೆಯ ನಿರ್ದೇಶಕನಾಗಿ ನಾನು ಭಾಗವಹಿಸಬೇಕಿದೆ. ಜೊತೆಗೆ ಕೆಲವು ಸಭೆಗಳಲ್ಲಿಯೂ ಭಾಗವಹಿಸಬೇಕಾಗಿದೆ' ಎಂದು ಕಾರ್ತಿ ಅವರು ಕೋರ್ಟ್‌ಗೆ ಮಾಹಿತಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT