ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ | ಸ್ವಾತಂತ್ರ್ಯ ದಿನಾಚರಣೆ, ಮೊಹರಂ ಸೇರಿದಂತೆ 4 ದಿನ ಮದ್ಯ ಮಾರಾಟ ನಿಷೇಧ

Published 26 ಜುಲೈ 2023, 9:29 IST
Last Updated 26 ಜುಲೈ 2023, 9:29 IST
ಅಕ್ಷರ ಗಾತ್ರ

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ, ಮೊಹರಂ ಸೇರಿದಂತೆ ನಾಲ್ಕು ಹಬ್ಬಗಳಂದು ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ.

ಪ್ರತಿ ತ್ರೈಮಾಸಿಕಕೊಮ್ಮೆ ದೆಹಲಿ ಸರ್ಕಾರ 'ಡ್ರೈ ಡೇ' (ಮದ್ಯ ಮಾರಾಟ ನಿಷೇಧ ದಿನ) ದಿನಾಂಕ ಘೋಷಿಸುತ್ತದೆ. ಇದರಂತೆ ಈ ತ್ರೈಮಾಸಿಕದ 'ಡ್ರೈ ಡೇ' ದಿನಾಂಕಗಳನ್ನು ಘೋಷಿಸಿ ಅಬಕಾರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ.

'ಮೊಹರಂ (ಜುಲೈ 29) , ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್ 15), ಕೃಷ್ಣ ಜನ್ಮಾಷ್ಟಮಿ (ಸೆಪ್ಟೆಂಬರ್ 7), ಈದ್-ಎ-ಮಿಲಾದ್ (ಸೆಪ್ಟೆಂಬರ್ 28) ಈ ನಾಲ್ಕು ದಿನಗಳಂದು ಮದ್ಯ ಮಾರಾಟ ನಿಷೇಧಿಸುವ ಅಬಕಾರಿ ಇಲಾಖೆಯ ಪ್ರಸ್ತಾವನೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅನುಮೋದಿಸಿದ್ದಾರೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT