ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ | ಗಾಳಿಯ ಗುಣಮಟ್ಟ ಸುಧಾರಣೆ: ವಾಹನ ಸಂಚಾರದ ಮೇಲಿನ ನಿರ್ಬಂಧ ತೆರವು

Published 29 ನವೆಂಬರ್ 2023, 2:53 IST
Last Updated 29 ನವೆಂಬರ್ 2023, 2:53 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಎನ್‌ಸಿಆರ್‌ನಲ್ಲಿ ಗಾಳಿಯ ಗುಣಮಟ್ಟ ಕೊಂಚ ಸುಧಾರಣೆ ಕಂಡಿದ್ದು, ಪೆಟ್ರೋಲ್‌ ಮತ್ತು ಡೀಸೆಲ್‌ ವಾಹನಗಳ ಸಂಚಾರದ ಮೇಲಿನ ನಿರ್ಬಂಧವನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.

ವಾಯುಗುಣಮಟ್ಟದ ಎಕ್ಯೂಐ (air quality index) ಪ್ರಮಾಣ ಸೋಮವಾರ 395 ರಿಂದ ಮಂಗಳವಾರ 312ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದೆ.

ದೆಹಲಿ-ಎನ್‌ಸಿಆರ್‌ನ ಗಾಳಿಯ ಗುಣಮಟ್ಟದ ಎಕ್ಯೂಐ ಪ್ರಮಾಣ ಸುಧಾರಣೆ ಕಂಡಿದೆ. ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸಲು ವಾಯು ಗುಣಮಟ್ಟ ನಿರ್ವಹಣೆ ಆಯೋಗವು (ಸಿಎಕ್ಯೂಎಂ) ಮಂಗಳವಾರ ಸಭೆ ನಡೆಸಿದೆ.

ದೆಹಲಿ, ಗುರುಗ್ರಾಮ್, ಫರಿದಾಬಾದ್, ಘಾಜಿಯಾಬಾದ್ ಮತ್ತು ಗೌತಮ್ ಬುಧ್ ನಗರದಲ್ಲಿ ಡಿಸೇಲ್ ಮತ್ತು ಪೆಟ್ರೋಲ್ ಬಳಕೆಯ ವಾಹನಗಳ (ನಾಲ್ಕು ಚಕ್ರ) ಸಂಚಾರದ ಮೇಲಿನ ನಿರ್ಬಂಧಗಳನ್ನು ದೆಹಲಿ ಸಾರಿಗೆ ಇಲಾಖೆ ತೆರವುಗೊಳಿಸುವ ಸಾಧ್ಯತೆ ಇದೆ.

ಜಿಆರ್‌ಎಪಿ (Graded Response Action Plan) ಹಂತ -IIIರ ಅಡಿಯಲ್ಲಿನ ನಿರ್ಬಂಧನೆಗಳನ್ನು ಹಿಂಪಡೆದರೂ, ಜಿಆರ್‌ಎಪಿ I ಮತ್ತು IIರ ಹಂತ ಅನ್ವಯವಾಗುತ್ತದೆ. ವಾಯುಗುಣಮಟ್ಟದಲ್ಲಿ ಕಂಡುಬರುವ ಬದಲಾವಣೆಗಳನ್ನು ಸಂಬಂಧಿತ ಏಜೆನ್ಸಿಗಳು ಮೇಲ್ವಿಚಾರಣೆ ಮಾಡುತ್ತವೆ ಎಂದು ವಾಯು ಗುಣಮಟ್ಟ ನಿರ್ವಹಣೆ ಆಯೋಗ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT