ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಚ ಇಳಿಕೆ ಕಂಡ ದೆಹಲಿ ವಾಯುಮಾಲಿನ್ಯ: ಕಾರಣ ಏನು?

ದೆಹಲಿ ವಾಯುಮಾಲಿನ್ಯ ಕೊಂಚ ಇಳಿಕೆ ಕಂಡಿದ್ದು ಗಾಳಿಯ ಗುಣಮಟ್ಟದಲ್ಲಿ ಬದಲಾವಣೆ ಕಾಣುತ್ತಿರುವುದು ತಿಳಿದು ಬಂದಿದೆ.
Published 28 ನವೆಂಬರ್ 2023, 2:31 IST
Last Updated 28 ನವೆಂಬರ್ 2023, 2:31 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ವಾಯುಮಾಲಿನ್ಯ ಕೊಂಚ ಇಳಿಕೆ ಕಂಡಿದ್ದು ಗಾಳಿಯ ಗುಣಮಟ್ಟದಲ್ಲಿ ಬದಲಾವಣೆ ಕಾಣುತ್ತಿರುವುದು ತಿಳಿದು ಬಂದಿದೆ.

ಮಳೆ ಹಾಗೂ ಗಾಳಿಯ ವೇಗ ಬಿರುಸುಪಡೆದುಕೊಳ್ಳುತ್ತಿರುವುದರಿಂದ ದೆಹಲಿಯ ವಾಯುಮಾಲಿನ್ಯ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ಸೋಮವಾರ ದೆಹಲಿ ಹಾಗೂ ದೆಹಲಿ ಸುತ್ತಮುತ್ತ 7.2 ಮಿಲಿ ಮೀಟರ್ ಮಳೆಯಾಗಿದೆ. ಗಂಟೆಗೆ 20 ಕಿ.ಮೀ ವೇಗವಾಗಿ ಗಾಳಿ ಬೀಸುತ್ತಿರುವುದರಿಂದ ವಾಯುಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆ ಕಂಡಿದೆ ಎಂದು ಹೇಳಿದೆ.

ಇದರಿಂದ ಸೋಮವಾರ ರಾತ್ರಿ 8 ಗಂಟೆ ವೇಳೆಗೆ ವಾಯುಗುಣಮಟ್ಟದ ಎಕ್ಯೂಐ (air quality index) ಪ್ರಮಾಣ 400 ರಿಂದ 387ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದೆ. ಕಳೆದ ಶನಿವಾರ ಎಕ್ಯೂಐ ಪ್ರಮಾಣ 415ವರೆಗೆ ಇತ್ತು.

ಎಕ್ಯೂಐ ಪ್ರಮಾಣ 50ರೊಳಗೆ ಇದ್ದರೆ ಮಾತ್ರ ಅದನ್ನು ಉತ್ತಮ ವಾಯುಗುಣಮಟ್ಟ ಎಂದು ಕರೆಯುತ್ತಾರೆ. ದೆಹಲಿ ಈ ವರ್ಷ 400 ಕ್ಕೂ ಅಧಿಕ ಎಕ್ಯೂಐ ಹೊಂದಿ 10 ದಿನ ಅತ್ಯಂತ ಗರಿಷ್ಠ ಪ್ರಮಾಣದ ಕಳಪೆ ವಾಯುಗುಣಮಟ್ಟ ಹೊಂದಿ ದಾಖಲೆ ನಿರ್ಮಿಸಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT