ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್ ಸರ್ವೀಸ್ ಸೆಂಟರ್‌ ನಕಲಿ ವೆಬ್‌ಸೈಟ್‌ ಮೂಲಕ ವಂಚನೆ: ಮೂವರ ಬಂಧನ

Published 18 ಮೇ 2023, 15:45 IST
Last Updated 18 ಮೇ 2023, 15:45 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರದ ನಕಲಿ ವೆಬ್‌ಸೈಟ್‌ ರಚಿಸಿ ಸಾವಿರಕ್ಕೂ ಹೆಚ್ಚು ಮಂದಿಗೆ ವಂಚನೆ ಎಸಗಿದ ಆರೋಪದಲ್ಲಿ ಮೂವರನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮೋನು ಶರ್ಮಾ (24), ಕುಲ್‌ದೀಪ್‌ ಸಿಂಗ್‌ (27) ಮತ್ತು ಚಿತ್ರೇಶ್‌ ಗೋಯಲ್‌ (26) ಬಂಧಿತರು. ಆರೋಪಿಗಳು ನಕಲಿ ವೆಬ್‌ಸೈಟ್‌ ಮೂಲಕ ಗ್ರಾಮೀಣ ಪ್ರದೇಶದ ಜನರಿಂದ ಸರ್ಕಾರಿ ಸೇವೆಗಳ ಹೆಸರಿನಲ್ಲಿ ₹ 17 ಲಕ್ಷ ಪಡೆದು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಮನ್ ಸರ್ವೀಸ್ ಸೆಂಟರ್ (ಸಿಎಸ್‌ಸಿ) ನಕಲಿ ವೆಬ್‌ಸೈಟ್‌ ಮೂಲಕ ಇವರು ವಂಚನೆ ನಡೆಸಿದ್ದಾರೆ ಎಂದೂ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT