ನವದೆಹಲಿ: ಸುದ್ದಿ ಮಾಧ್ಯಮ ‘ದಿ ವೈರ್’ ಸಂಪಾದಕರಾದ ಸಿದ್ಧಾರ್ಥ್ ವರದರಾಜನ್, ಎಂ.ಕೆ ವೇಣು ಮತ್ತು ಜಾಹ್ನವಿ ಸೇನ್ ಅವರ ಮನೆಗಳಲ್ಲಿ ದೆಹಲಿ ಪೊಲೀಸರು ಸೋಮವಾರ ಶೋಧ ನಡೆಸಿದ್ದಾರೆ.

ಭಾರತೀಯ ಜನತಾ ಪಕ್ಷ (ಬಿಜೆಪಿ) ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ‘ದಿ ವೈರ್’ ವಿರುದ್ಧ ಸಲ್ಲಿಸಿದ ದೂರಿನ ಆಧಾರದ ಮೇಲೆ ವಂಚನೆ, ಫೋರ್ಜರಿ, ಮಾನನಷ್ಟ ಮತ್ತು ಕ್ರಿಮಿನಲ್ ಪಿತೂರಿ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದು, ಪರಿಶೀಲನೆ ಕೈಗೊಂಡಿದ್ದಾರೆ ಎನ್ನಲಾಗಿದೆ.

‘ಪೊಲೀಸರು ಸಂಜೆ 4.40 ರ ಸುಮಾರಿಗೆ ಬಂದು 6 ಗಂಟೆಗೆ ಹೋದರು. ಅಮಿತ್ ಮಾಳವಿಯಾ ಸಲ್ಲಿಸಿರುವ ದೂರಿನ ಸಂಬಂಧ ದಾಖಲಾಗಿರುವ ಎಫ್‌ಐಆರ್ ಹಿನ್ನೆಲೆಯಲ್ಲಿ, ದೆಹಲಿಯ ಅಪರಾಧ ವಿಭಾಗದ ಪೊಲೀಸರ ಪರವಾಗಿ ಇಲ್ಲಿಗೆ ಬಂದಿರುವುದಾಗಿ ಅವರು ಹೇಳಿದರು. ಮಾಹಿತಿಯನ್ನು ಕಾಪಿ ಮಾಡಿಕೊಳ್ಳಲು ಅವರು ನನ್ನ ಐಫೋನ್ ಮತ್ತು ಐಪ್ಯಾಡ್ ಅನ್ನು ತೆಗೆದುಕೊಂಡು ಹೋದರು. ವರದರಾಜನ್ ಅವರ ಮನೆಯ ಮೇಲೂ ದಾಳಿ ನಡೆಯುತ್ತಿದೆ’ ಎಂದು ಎಂಕೆ ವೇಣು ಅವರ ಹೇಳಿಕೆ ಉಲ್ಲೇಖಿಸಿ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಇವುಗಳನ್ನೂ ಓದಿ

ಗೌರಿ ಹಂತಕರ ಹಿಟ್ ಲಿಸ್ಟ್ನಲ್ಲಿ ’ದಿ ವೈರ್’ ಸಂಪಾದಕ ಸಿದ್ಧಾರ್ಥ ವರದರಾಜನ್

ಪತ್ರಕರ್ತೆಯರಿಗೆ ಟ್ರೋಲ್: ಸಂಪಾದಕರ ಕೂಟ ಕಳವಳ

ಮಾಜಿ ಸಲಹೆಗಾರನ ವಿರುದ್ಧ ‘ದಿ ವೈರ್’ ದೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.