ನವದೆಹಲಿ: ನಗರದ ಶೇ.37ರಷ್ಟು ಮಹಿಳೆಯರು ಕೋವಿಡ್ ಬಳಿಕ ತಮ್ಮ ಮದ್ಯ ಸೇವನೆ ಪ್ರಮಾಣ ಹೆಚ್ಚಿಸಿಕೊಂಡಿರುವುದು ಇತ್ತೀಚಿನ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.

ಕಮ್ಯುನಿಟಿ ಅಗೈಸ್ಟ್ ಡ್ರಂಕನ್ ಡ್ರೈವಿಂಗ್(ಸಿಎಡಿಡಿ) ಎಂಬ ಎನ್‌ಜಿಒ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಕಳೆದ 3 ವರ್ಷಗಳಲ್ಲಿ ಮದ್ಯ ಸೇವನೆ ಪ್ರಮಾಣ ಹೆಚ್ಚಾಗಿರುವುದನ್ನು ಮಹಿಳೆಯರು ಒಪ್ಪಿಕೊಂಡಿದ್ದಾರೆ. ಅದಕ್ಕೆ ಒತ್ತಡ ಕಾರಣವೆಂದು ಶೇ.45ರಷ್ಟು ಮಂದಿ ಹೇಳಿದ್ದಾರೆ.

ಲಾಕ್‌ಡೌನ್, ಮದ್ಯ ದೊರೆಯುವಿಕೆ ಪ್ರಮಾಣ ಏರಿಕೆ, ಖರ್ಚಿನ ಮಾದರಿ ಬದಲಾವಣೆ ಮುಂತಾದವು ಮಹಿಳೆಯರ ಕುಡಿತದ ಅಭ್ಯಾಸವನ್ನು ಹೆಚ್ಚಿಸಿದೆ ಎಂದು ಸಮೀಕ್ಷೆ ತಿಳಿಸಿದೆ.

5000 ಮಹಿಳೆಯರನ್ನು ಸಮೀಕ್ಷೆಗಾಗಿ ಮಾತನಾಡಿಸಲಾಗಿದ್ದು, ಶೇ.37.6ರಷ್ಟು ಮಂದಿ ಕುಡಿತದ ಪ್ರಮಾಣ ಹೆಚ್ಚಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಬಹಳಷ್ಟು ಸಮಯ ಕಳೆಯಲು ಕುಡಿತವನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.

ಸುಲಭವಾಗಿ ಮದ್ಯ ಲಭ್ಯತೆ ಕೂಡ ಕುಡಿತದ ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದು ಸಮೀಕ್ಷೆ ಹೇಳಿದೆ. ಮುಂದಿನ 5 ವರ್ಷದಲ್ಲಿ ದೇಶದಲ್ಲಿ ಮಹಿಳೆಯರ ಮದ್ಯ ಸೇವನೆ ಮಾರುಕಟ್ಟೆ ಶೇ.25ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರದ ಅಧ್ಯಯನ ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.