ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರು 20 ದಿನಗಳ 'ಪೆರೋಲ್' ಮೇಲೆ ಜೈಲಿನಿಂದ ಇಂದು (ಬುಧವಾರ) ಬಿಡುಗಡೆಯಾಗಿದ್ದಾರೆ.
ಹರಿಯಾಣದ ರೋಹಕ್ಟ್‌ನ ಸುನಾರಿಯಾ ಜೈಲಿನಿಂದ ಬಿಗಿ ಭದ್ರತೆಯ ನಡುವೆ ಗುರ್ಮೀತ್ ರಾಮ್ ರಹೀಮ್ ಸಿಂಗ್ ಹೊರನಡೆದರು.
ಈ ತಾತ್ಕಾಲಿಕ ಬಿಡುಗಡೆ ಅವಧಿಯನ್ನು ಗುರ್ಮೀತ್ ಅವರು ಉತ್ತರ ಪ್ರದೇಶದ ಬಾಗ್‌ಪತ್‌ನ ಬರ್ನಾವದಲ್ಲಿರುವ ಡೇರಾ ಆಶ್ರಮದಲ್ಲಿ ಕಳೆಯಲಿದ್ದಾರೆ.
ಗುರ್ಮೀತ್‌ಗೆ 20 ದಿನಗಳ ಪೆರೋಲ್ ಅನ್ನು ಹರಿಯಾಣ ಸರ್ಕಾರ ಮಂಜೂರು ಮಾಡಿದೆ. ಈ ಸಂದರ್ಭದಲ್ಲಿ ಚುನಾವಣಾ ಚಟುವಟಿಕೆ, ಪ್ರಚಾರ, ಭಾಷಣ ಮಾಡದಂತೆ ನಿರ್ಬಂಧಿಸಲಾಗಿದೆ.
ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್‌ಗೆ 20 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ.
ಅಕ್ಟೋಬರ್ 5ರಂದು ಹರಿಯಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅ.8ರಂದು ಫಲಿತಾಂಶ ಹೊರಬೀಳಲಿದೆ. ಈ ವೇಳೆ ಗುರ್ಮೀತ್‌ಗೆ ಪೆರೋಲ್ ನೀಡುವುದನ್ನು ವಿರೋಧ ಪಕ್ಷಗಳು ಟೀಕಿಸಿವೆ.
ಈ ಹಿಂದೆ ಆಗಸ್ಟ್‌ನಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆ ವೇಳೆ ಗುರ್ಮೀತ್, 21 ದಿನಗಳ 'ಫರ್ಲೊ' (ದೀರ್ಘಾವಧಿ ಜೈಲು ಶಿಕ್ಷಗೆ ಒಳಗಾಗಿರುವವರಿಗೆ ತಾತ್ಕಾಲಿಕ ಬಿಡುಗಡೆ) ಮೇಲೆ ಬಿಡುಗಡೆಯಾಗಿದ್ದರು.