ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರಸ್ಪರ ಹಿತಾಸಕ್ತಿಗಳ ಆಧಾರದಲ್ಲಿ ಭಾರತ–ಮಾಲ್ದೀವ್ಸ್‌ ಅಭಿವೃದ್ಧಿ: ಎಸ್.ಜೈಶಂಕರ್‌

Published 9 ಮೇ 2024, 15:55 IST
Last Updated 9 ಮೇ 2024, 15:55 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮತ್ತು ಮಾಲ್ದೀವ್ಸ್‌ನ ಅಭಿವೃದ್ಧಿಯು ಎರಡು ರಾಷ್ಟ್ರಗಳ ಹಿತಾಸಕ್ತಿ ಮತ್ತು ಪರಸ್ಪರ ಸೂಕ್ಷ್ಮತೆಗಳನ್ನು ಗೌರವಿಸುವ ಆಧಾರದಲ್ಲಿ ನಡೆಯುತ್ತದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ತಿಳಿಸಿದರು.

ಮಾಲ್ದೀವ್ಸ್‌ನ ವಿದೇಶಾಂಗ ಸಚಿವ ಮೂಸಾ ಜಮೀರ್‌ ಅವರೊಂದಿಗೆ ಗುರುವಾರ ನವದೆಹಲಿಯಲ್ಲಿ ಜೈಶಂಕರ್‌ ಮಾತುಕತೆ ನಡೆಸಿದರು.

‘ನೆರೆಯ ರಾಷ್ಟ್ರಗಳಿಗೆ ಪ್ರಥಮ ಆದ್ಯತೆ ಮತ್ತು ಸಾಗರ್‌ ಮಿಷನ್‌ಗೆ ಭಾರತ ಬದ್ಧವಾಗಿದೆ. ಇಂದಿನ ಸಭೆಯು ವಿವಿಧ ವಲಯಗಳಲ್ಲಿನ ನಮ್ಮ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸಲಿದೆ’ ಎಂದರು. 

‘ಮಾಲ್ದೀವ್ಸ್‌ ಅಭಿವೃದ್ಧಿಗೆ ಸಹಕರಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತ ಪ್ರಮುಖವಾದದ್ದು. ನಾವು ಈ ಹಿಂದೆ ನೀಡಿದ್ದ ಆರ್ಥಿಕ ಸಹಕಾರವನ್ನು ವಿಸ್ತರಿಸಿದ್ದೇವೆ. ವಿವಿಧ ಸಂದರ್ಭಗಳಲ್ಲಿ ಮಾಲ್ದೀವ್ಸ್ ನೆರವಿಗೆ ಧಾವಿಸಿದ ಮೊದಲ ರಾಷ್ಟ್ರ ಭಾರತ’ ಎಂದು ತಿಳಿಸಿದರು.  

ಮಾಲ್ದೀವ್ಸ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಭಾರತೀಯ ಸೇನೆಯನ್ನು ಹಿಂಪಡೆದುಕೊಳ್ಳುವಂತೆ ಅಲ್ಲಿನ ಪ್ರಧಾನಿ ಒತ್ತಾಯಿಸಿದ ಬಳಿಕ ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯ ಹದಗೆಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT