ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಭಾರತದಲ್ಲೀಗ ಶ್ರಾವಣ ಸಂಭ್ರಮ, ಸೋಮವಾರದ ವಿಶೇಷ ಪೂಜೆ

Last Updated 6 ಆಗಸ್ಟ್ 2018, 4:42 IST
ಅಕ್ಷರ ಗಾತ್ರ

ನವದೆಹಲಿ:ಉತ್ತರ ಭಾರತದಲ್ಲೀಗ ಶ್ರಾವಣ ಮಾಸದ ಸಂಭ್ರಮ. ವಿವಿಧ ದೇಗುಲಗಳಲ್ಲಿ ವಿಶೇಷ ಪೂಜಾಕಾರ್ಯಗಳು ಜರುಗುತ್ತಿವೆ.

ಶ್ರಾವಣ ಸೋಮವಾರದ ಇಂದು ಭಕ್ತರು ಬೆಳ್ಳಂಬೆಳಿಗ್ಗೆಯೇ ದೇಗುಲಗಳಿಗೆ ಭೇಟಿ ನೀಡುತ್ತಿದ್ದು, ವಿವಿಧ ಪೂಜೆ ನೆರವೇರಿಸುತ್ತಿದ್ದಾರೆ. ಉತ್ತರ ಭಾರತದಲ್ಲಿ ಶ್ರಾವಣ ಆಚರಿಸುತ್ತಿದ್ದರೆ, ಕರ್ನಾಟಕದಲ್ಲಿ ಆಗಸ್ಟ್‌ 11ರಿಂದ, ನಾಗರ ಅಮಾವಾಸ್ಯೆಯ ಬಳಿಕ ಶ್ರಾವಣ ಮಾಸಾಚರಣೆ ನಡೆಯುತ್ತದೆ. ನಾಗರ ಪಂಚಮಿಯಂದು ನಾಗರಕಲ್ಲು, ಹುತ್ತಕ್ಕೆ ಹಾಲೆರೆದು ಪೂಜೆ ಸಲ್ಲಿಸುವ ಪದ್ಧತಿ ರಾಜ್ಯದಲ್ಲಿರೂಢಿಯಲ್ಲಿದೆ.

ಮುಂಬೈನ ಬಾಬುಲ್‌ನಾಥ ದೇವಸ್ಥಾನದಲ್ಲಿ ಎರಡನೇ ಸೋಮವಾರದ ಅಂಗವಾಗಿ ‘ಆರತಿ’ ಪೂಜಾ ಕಾರ್ಯಕ್ರಮ ಜರುಗುತ್ತಿವೆ.

ದೆಹಲಿಯ ಗೌರಿಶಂಕರದೇವಸ್ಥಾನದಲ್ಲಿ ಭಕ್ತರು ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಜಾರ್ಖಂಡ್‌ನ ದಿಯೋಘರ್‌ನಲ್ಲಿ ಬಾಬಾ ಬೈದ್ಯನಾಥ ಧಾಮದಲ್ಲಿ ಶಿವನ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿದರು.

ವಾರಣಾಸಿಯ ಕಾಶಿ ವಿಶ್ವನಾಥ ದೇಗುಲದಲ್ಲಿ ಪೂಜೆ ಸಲ್ಲಿಸಲು ಹೊರಗೆ ಭಕ್ತರು ಸರದಿಯಲ್ಲಿ ನಿಂತು ಕಾಯುತ್ತಿದ್ದಾರೆ.

ಉತ್ತರಾಖಂಡದ ಹರಿದ್ವಾರದಲ್ಲಿ ದಕ್ಷ ಮಹಾದೇವ ದೇವಸ್ಥಾನದಲ್ಲಿ ಭಕ್ತರು ಶಿವ ಲಿಂಗಕ್ಕೆ ಹಾಲೆರೆದು ಪೂಜೆ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT