ನವದೆಹಲಿ: ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅರ್ಹವಲ್ಲದ ಆಸನಗಳನ್ನು ನೀಡುವುದರ ವಿರುದ್ಧ ವಿಮಾನಯಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಮಂಗಳವಾರ ಎಚ್ಚರಿಕೆ ನೀಡಿದೆ.

ಡಿಜಿಸಿಎ, ಈ ವರ್ಷದ ಆರಂಭದಲ್ಲಿ ವಿಮಾನಯಾನ ಸಂಸ್ಥೆಗಳ ವಿಮಾನಗಳಲ್ಲಿನ ಆಸನಗಳು, ಕ್ಯಾಬಿನ್ ಮತ್ತು ಇತರ ವ್ಯವಸ್ಥೆಗಳ ಪರಿಶೋಧನೆ ನಡೆಸಿತ್ತು. ಈ ಸಂದರ್ಭದಲ್ಲಿ ಹಲವಾರು ಆಸನಗಳು ಮುರಿದುಹೋಗಿದ್ದು ಅಥವಾ ಬಳಸಲು ಸಾಧ್ಯವಾಗದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಡಿಜಿಸಿಎ ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಮಂಗಳವಾರ ಪತ್ರ ಕಳುಹಿಸಿದೆ.

‘ಇದು ಪ್ರಯಾಣಿಕರಿಗೆ ಅನಾನುಕೂಲತೆ ಉಂಟುಮಾಡುವುದು ಮಾತ್ರವಲ್ಲದೆ, ಅವರ ಸುರಕ್ಷತೆಗೆ ಸಮಸ್ಯೆಗಳನ್ನೂ ಆಹ್ವಾನಿಸದಂತಾಗುತ್ತದೆ. ಆದ್ದರಿಂದ ವಿಮಾನಯಾನ ನಿಯಮಗಳ ಪ್ರಕಾರ ಆಸನಗಳು ಸೇರಿದಂತೆ ಎಲ್ಲಾ ವ್ಯವಸ್ಥೆಯು ಅನುಮೋದಿತ ವಿನ್ಯಾಸವನ್ನೇ ಒಳಗೊಂಡಿರಬೇಕು’ ಎಂದು ಡಿಜಿಸಿಎ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.