ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಂಪಲ್‌ ಯಾದವ್ ಆಸ್ತಿ ₹ 15.5 ಕೋಟಿ

Published 16 ಏಪ್ರಿಲ್ 2024, 20:15 IST
Last Updated 16 ಏಪ್ರಿಲ್ 2024, 20:15 IST
ಅಕ್ಷರ ಗಾತ್ರ

ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಪತ್ನಿ, ಉತ್ತರ ಪ್ರದೇಶದ ಮೈನ್‌ಪುರಿ ಕ್ಷೇತ್ರದ ಅಭ್ಯರ್ಥಿ ಡಿಂಪಲ್‌ ಯಾದವ್ ಅವರು ಒಟ್ಟು ₹15.5 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ.

ಹಾಲಿ ಸಂಸದೆಯೂ ಆಗಿರುವ ಡಿಂಪಲ್‌ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು. 2022ರಲ್ಲಿ ನಡೆದ ಉಪಚುನಾವಣೆ ವೇಳೆ ಅವರು ₹ 14 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು.

₹ 10.44 ಕೋಟಿ ಸ್ಥಿರಾಸ್ತಿ ಹಾಗೂ ₹ 5.10 ಕೋಟಿ ಚರಾಸ್ತಿ ಇರುವುದಾಗಿ ಅವರು ಪ್ರಮಾಣದಲ್ಲಿ ತಿಳಿಸಿದ್ದಾರೆ. ಪತಿ ಅಖಿಲೇಶ್‌ ಯಾದವ್‌ ಬಳಿ ₹ 9.22 ಕೋಟಿ ಚರಾಸ್ತಿ ಹಾಗೂ ₹ 17.22 ಕೋಟಿ ಸ್ಥಿರಾಸ್ತಿ ಇರುವುದಾಗಿ ಮಾಹಿತಿ ನೀಡಿದ್ದಾರೆ. 

2019 ರಲ್ಲಿ ಕನೌಜ್‌ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಸಮಯದಲ್ಲಿ ಡಿಂಪಲ್‌ ಅವರು ₹ 3.68 ಕೋಟಿ ಚರಾಸ್ತಿ ಮತ್ತು ₹ 9.30 ಕೋಟಿ ಸ್ಥಿರಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT